ಬೇಟೆಗಾಗಿ ತೆರಳಿದ್ದಾಗ ಮಿಸ್‌ಫೈರ್ – ಯುವಕನ ದುರ್ಮರಣ, ಮೂವರ ಸೆರೆ, ಮೂವರು ಪರಾರಿ!
ಚಿಕ್ಕಮಗಳೂರು: ರಾತ್ರಿ ವೇಳೆ ಶಿಕಾರಿಗೆ (Hunting) ತೆರಳಿದ್ದಾಗ ಮಿಸ್‌ಫೈರ್ ಆಗಿ ಯುವಕ ಸಾವನ್ನಪ್ಪಿರುವ ಘಟನೆ ಕೊಪ್ಪ (Koppa) ತಾಲೂಕಿನ ಕಾಡಂಚಿನ ಗ್ರಾಮವಾದ ಕಡೇಮನೆಯಲ್ಲಿ ನಡೆದಿದೆ. ಗ್ರಾಮದ ಚೇತನ್ ಗುಂಡು ಬಿದ್ದು ಸ...

ಚಿಕ್ಕಮಗಳೂರು: ರಾತ್ರಿಯ ಸಮಯದಲ್ಲಿ ಬೇಟೆಯಾಡಲು (Hunting) ತೆರಳಿದ್ದಾಗ ಬಂದೂಕು ಸಿಡಿದು ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಕೊಪ್ಪ (Koppa) ತಾಲೂಕಿನ ಅರಣ್ಯದ ಅಂಚಿನಲ್ಲಿರುವ ಕಡೇಮನೆ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ನಿವಾಸಿ ಚೇತನ್ ಗುಂಡೇಟಿನಿಂದ ಮೃತಪಟ್ಟ ಯುವಕ. ಸೆ.30 ರ ರಾತ್ರಿ 7 ಜನ ಸ್ನೇಹಿತರು ಕಾಡಿಗೆ ಬೇಟೆಗೆಂದು ಹೋಗಿದ್ದರು. ಬೇಟೆಯಾಡುವ ಸಂದರ್ಭದಲ್ಲಿ ಪ್ರಾಣಿಯ ಮೇಲೆ ಗುಂಡು ಹಾರಿಸಲು ಯತ್ನಿಸಿದಾಗ ಆಕಸ್ಮಿಕವಾಗಿ ಮಿಸ್ ಫೈರ್ ಆಗಿ ಜೊತೆಯಲ್ಲಿದ್ದ ಚೇತನಿಗೆ ಗುಂಡು ತಗುಲಿದೆ. ಕೂಡಲೇ ಆತನ ಸ್ನೇಹಿತರು ಚೇತನನ್ನು ಜಯಪುರ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರಾದರೂ, ಹೊಟ್ಟೆಯ ಭಾಗಕ್ಕೆ ಗುಂಡು ಬಿದ್ದಿದ್ದರಿಂದ ಚೇತನ್ ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.
ಈ ಏಳು ಮಂದಿಯಲ್ಲಿ ಚೇತನನ್ನು ಆಸ್ಪತ್ರೆಗೆ ಕರೆತಂದಿದ್ದ ಮೂವರು ಯುವಕರನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಆದರೆ, ಗುಂಡು ಹಾರಿಸಿದ ಇನ್ನಿತರ ಮೂವರು ಪರಾರಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಜಯಪುರ ಆಸ್ಪತ್ರೆಯ ಎದುರು ತಮ್ಮ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತನಿಖೆ ಪೂರ್ಣಗೊಂಡ ಬಳಿಕ ಗುಂಡು ಹಾರಿಸಿದ್ದು ಉದ್ದೇಶಪೂರ್ವಕವಾಗಿಯೇ ಅಥವಾ ಮಿಸ್ ಫೈರ್ ಆಗಿ ಸಂಭವಿಸಿದೆಯೇ ಎಂಬುದು ತಿಳಿದುಬರಲಿದೆ.




