ಚಾ.ನಗರ ಜಿಲ್ಲೆಗೆ ಕಾಲಿಟ್ಟ ಕೇಂದ್ರ ಬರ ಅಧ್ಯಯನ ತಂಡ; ಸ್ಥಿತಿಗತಿ ವೀಕ್ಷಣೆ
– ಎಕರೆಗೆ 50,000 ರೂ. ಪರಿಹಾರ ನೀಡುವಂತೆ ರೈತರ ಆಗ್ರಹ ಚಾಮರಾಜನಗರ: ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ (Central Drought Study Team) ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಐಎಎಸ್ ಅಧಿಕಾರಿ ಡಾ. ಸುಧಾಮ್ ಬಾಗ್ ನೇತೃತ...

– ಎಕರೆಗೆ 50,000 ರೂ. ಪರಿಹಾರ ನೀಡುವಂತೆ ರೈತರ ಆಗ್ರಹ
ಚಾಮರಾಜನಗರ: ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ (Central Drought Study Team) ಆಗಮಿಸಿ ಪರಿಶೀಲನೆ ನಡೆಸಿದೆ. ಐಎಎಸ್ ಅಧಿಕಾರಿ ಡಾ. ಸುಧಾಮ್ ಬಾಗ್ ಅವರ ಮುಂದಾಳತ್ವದಲ್ಲಿ ಈ ತಂಡ ಭೇಟಿ ನೀಡಿದೆ.
ಗುಂಡ್ಲುಪೇಟೆ ಕ್ಷೇತ್ರದಿಂದ ಬರ ಅಧ್ಯಯನ ಕಾರ್ಯ ಆರಂಭಗೊಂಡಿತು. ಕೆರೆಹಳ್ಳಿ ಗ್ರಾಮದಲ್ಲಿ ಒಣಗಿ ಹೋಗಿರುವ ಜೋಳದ ಬೆಳೆಯನ್ನು ತಂಡ ಪರಿಶೀಲಿಸಿತು. ಈ ಸಂದರ್ಭದಲ್ಲಿ ಬೆಳೆ ಸಾಲವನ್ನು ಮನ್ನಾ ಮಾಡಬೇಕೆಂದು ರೈತರು ಒತ್ತಾಯಿಸಿದರು. ಕಳೆದ ಆರು ತಿಂಗಳಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ ಹಾಗೂ ದನಕರುಗಳಿಗೆ ಮೇವಿನ ಕೊರತೆಯಿದೆ ಎಂದು ರೈತರು ತಮ್ಮ ನೋವನ್ನು ಹಂಚಿಕೊಂಡರು.
ಜೂನ್ ತಿಂಗಳಲ್ಲಿ ಜೋಳ ಬಿತ್ತನೆ ಮಾಡಿದ್ದೆವು, ಆದರೆ ಮಳೆಯಾಗದ ಕಾರಣ ಬೆಳೆ ಸಂಪೂರ್ಣವಾಗಿ ಒಣಗಿದೆ ಎಂದು ರೈತರು ತಿಳಿಸಿದರು. ಪಶುಗಳಿಗೆ ಮೇವು ಸಿಗುತ್ತಿಲ್ಲ, ಚಿನ್ನವನ್ನು ಅಡವಿಟ್ಟು ಸಾಲ ಮಾಡಿದ್ದೇವೆ. ಈಗ ಜೀವನೋಪಾಯಕ್ಕಾಗಿ ಮೈಸೂರಿಗೆ ಗಾರೆ ಕೆಲಸಕ್ಕೆ ಹೋಗುತ್ತಿದ್ದೇವೆ ಎಂದು ವಿವರಿಸಿದರು. ಎಕರೆಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.
ರಾಜ್ಯ ಸರ್ಕಾರ ಘೋಷಣೆ ಮಾಡಿರುವ 2,500 ರೂ.ನಿಂದ ಯಾವುದೇ ಪ್ರಯೋಜನವಿಲ್ಲ. ಇದು ಒಂದು ದಿನದ ಉಳುಮೆಯ ಕೂಲಿಗೂ ಸಾಲುವುದಿಲ್ಲ ಎಂದು ಕೇಂದ್ರ ತಂಡದ ಎದುರು ರೈತರು ತಮ್ಮ ಅಳಲು ತೋಡಿಕೊಂಡರು. ಇದನ್ನೂ ಓದಿ: ಕೆಆರ್‌ಎಸ್ ಬಳಿ ನಡೆಯುವ ಕಾವೇರಿ ಆರತಿ ಮುಂದೂಡಿಕೆ




