CM ಡಿ.ಕೆ. ಶಿವಕುಮಾರ್‌ಗಾಗಿ ತಡವಾಯ್ತಾ IndiGo flight? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗಾಗಿ ಬೆಂಗಳೂರಿನಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನವನ್ನು ತಡವಾಗಿ ಹೊರಟಿತ್ತು ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಜೋ...

ಬೆಂಗಳೂರು: ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗಾಗಿ ಬೆಂಗಳೂರಿನಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವು ತಡವಾಗಿ ಹಾರಾಟ ನಡೆಸಿತು ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಮಂಗಳವಾರ ಇಂಡಿಗೋ ವಿಮಾನ 6E 870, ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರುವವರೆಗೂ ಏರ್‌ಪೋರ್ಟ್ ರನ್‌ವೇನಲ್ಲಿ ಸುಮಾರು ಒಂದು ಗಂಟೆ ಕಾಲ ಕಾಯಬೇಕಾಯಿತು ಎಂದು ಪ್ರಯಾಣಿಕರೊಬ್ಬರು ದೂರು ನೀಡಿದ್ದಾರೆ. ಆದಾಗ್ಯೂ, ವಿಮಾನ ವಿಳಂಬಕ್ಕೆ ಕಾರ್ಯಾಚರಣೆಯ ಕಾರಣಗಳೇ ಕಾರಣ ಎಂದು ಇಂಡಿಗೋ ಸ್ಪಷ್ಟನೆ ನೀಡಿದೆ.
ಪ್ರಯಾಣಿಕರಾದ ಸುಪರ್ಣಾ ಸಿಂಗ್ ಅವರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕಿದ್ದ ವಿಮಾನದಲ್ಲಿದ್ದ ಪ್ರಯಾಣಿಕರು ಅನಿವಾರ್ಯವಾಗಿ ಕಾಯುವಂತಾಯಿತು. ವಿಳಂಬದ ಬಗ್ಗೆ ವಿಮಾನಯಾನ ಸಂಸ್ಥೆಯು ಸರಿಯಾದ ಮಾಹಿತಿ ಒದಗಿಸಲಿಲ್ಲ ಎಂದು ಅವರು ಆಪಾದಿಸಿದ್ದಾರೆ.
ಪೈಲಟ್ ಯಾವುದೇ ಕಾರಣವನ್ನು ಸ್ಪಷ್ಟಪಡಿಸಲಿಲ್ಲ. ಪ್ರಯಾಣಿಕರಾದ ನಾವು ಕಾಯುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿಮಾನ ಸಂಚಾರ ಟ್ರ್ಯಾಕಿಂಗ್ ವೆಬ್‌ಸೈಟ್‌ನಲ್ಲಿನ ದತ್ತಾಂಶದ ಪ್ರಕಾರ, ವಿಮಾನವು ರಾತ್ರಿ 7.30ಕ್ಕೆ ಹೊರಡಬೇಕಿತ್ತು, ಆದರೆ ರಾತ್ರಿ 8.06ಕ್ಕೆ ಅಂದರೆ ನಿಗದಿತ ಸಮಯಕ್ಕಿಂತ ಸುಮಾರು 36 ನಿಮಿಷ ತಡವಾಗಿ ಹಾರಾಟ ಆರಂಭಿಸಿದೆ ಎಂಬುದು ತಿಳಿದುಬಂದಿದೆ.
ಬೆಂಗಳೂರಿನಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ 6E870 ವಿಮಾನವು ಉಪ ಮುಖ್ಯಮಂತ್ರಿ ಆಗಮಿಸುವವರೆಗೂ ನಿನ್ನೆ ರಾತ್ರಿ ರನ್‌ವೇನಲ್ಲಿ ಒಂದು ಗಂಟೆ ಕಾಯಬೇಕಾಯಿತು. ಈ ವಿಳಂಬಕ್ಕೆ ಅವರೇ ಕಾರಣ ಎಂದು ಸಿಬ್ಬಂದಿಯೊಬ್ಬರು ಖಚಿತಪಡಿಸಿದ್ದಾರೆ.
ಮಂಗಳವಾರ ಶಿವಕುಮಾರ್ ಅವರು ಇದೇ ವಿಮಾನದಲ್ಲಿ ನವದೆಹಲಿಗೆ ಪ್ರಯಾಣಿಸಬೇಕಿತ್ತು ಎಂಬುದು ತಿಳಿದುಬಂದಿದೆ. ಆದರೂ, ವಿಮಾನ ವಿಳಂಬಕ್ಕೆ ಉಪ ಮುಖ್ಯಮಂತ್ರಿಗಳ ಆಗಮನವೇ ಕಾರಣ ಎಂಬ ಆರೋಪವನ್ನು ಇಂಡಿಗೋ ದೃಢಪಡಿಸಿಲ್ಲ. ವಿಮಾನವು ಕಾರ್ಯಾಚರಣೆಗೆ ಸಂಬಂಧಿಸಿದ ಕಾರಣಗಳಿಂದ ತಡವಾಗಿದೆ ಎಂದು ಏರ್‌ಲೈನ್ಸ್ ತಿಳಿಸಿದೆ.




