ಗಣಪತಿ ಶೋಭಾಯಾತ್ರೆಯಲ್ಲಿ ಕುಸಿದು ಬಿದ್ದ ಕಮಾನು – ವೃದ್ಧನ ಸ್ಥಿತಿ ಗಂಭೀರ!
ದಾವಣಗೆರೆ: ಹಿಂದೂ ಮಹಾಗಣಪತಿ ಶೋಭಾಯಾತ್ರೆ (Ganpati Procession) ವೇಳೆ ಡಿಜೆಗೆ ಅಳವಡಿಸಿದ್ದ LED ಕಮಾನು ಮರಿದುಬಿದ್ದು ವೃದ್ಧ ಗಾಯಗೊಂಡ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ. ಸಿದ್ದಲಿಂಗಪ್ಪ LED ಕಮಾನು...

ದಾವಣಗೆರೆ: ದಾವಣಗೆರೆಯಲ್ಲಿ (Davanagere) ಹಿಂದೂ ಮಹಾಗಣಪತಿ ಶೋಭಾಯಾತ್ರೆ (Ganpati Procession) ನಡೆಯುತ್ತಿದ್ದ ಸಂದರ್ಭದಲ್ಲಿ, ಡಿಜೆಗೆ ಅಳವಡಿಸಲಾಗಿದ್ದ LED ಕಮಾನು ಕುಸಿದು ಬಿದ್ದ ಪರಿಣಾಮ ವೃದ್ಧರೊಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಈ ಅವಘಡದಲ್ಲಿ ಸಿದ್ದಲಿಂಗಪ್ಪ ಎಂಬ ವೃದ್ಧ ಗಾಯಗೊಂಡಿದ್ದಾರೆ. ನಗರದ ಪಿಬಿ ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಸಮೀಪ ಈ ಘಟನೆ ಸಂಭವಿಸಿದೆ. ಕಮಾನಿನ ಮೇಲೆ ಹತ್ತಾರು ಯುವಕರು ಕುಳಿತಿದ್ದರಿಂದಲೇ ಅದು ಮುರಿದು ಬಿದ್ದಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ವೃದ್ಧರನ್ನು ಸ್ಥಳೀಯರು ಹಾಗೂ ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಮಾನು ಕುಸಿದು ಬಿದ್ದಿರುವ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಆರ್ಕೆಸ್ಟ್ರಾ ನೋಡ್ತಿದ್ದ ವೇಳೆ ದುರಂತ – ಲೈಟ್ ಕಂಬ ಬಿದ್ದು ಓರ್ವ ಸಾವು, ಮತ್ತೋರ್ವ ಗಂಭೀರ




