ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕರ್ನಾಟಕ

ಹನೂರು | ಮಳೆಯ ಅಬ್ಬರಕ್ಕೆ ತತ್ತರಿಸಿದ ಪ್ರದೇಶಗಳಲ್ಲಿ ಬಿಜೆಪಿ ನಾಯಕರ ಪರಿಶೀಲನೆ!

ಚಾಮರಾಜನಗರ: ಜಿಲ್ಲೆಯ ಹನೂರು (Hanur) ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಬಿಜೆಪಿ ನಾಯಕರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಜನರ ಕಷ್ಟವನ್ನು ಆಲಿಸುವ ಕೆಲಸಕ್ಕೆ ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ದಿನ...

· ಚಾಮರಾಜನಗರ
ಹನೂರು | ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಬಿಜೆಪಿ ನಾಯಕರ ಭೇಟಿ
ಹಂಚಿಕೊಳ್ಳಿ:

ಚಾಮರಾಜನಗರ: ಜಿಲ್ಲೆಯ ಹನೂರು (Hanur) ವ್ಯಾಪ್ತಿಯಲ್ಲಿ ಮಳೆಯಿಂದ ತೊಂದರೆಗೀಡಾದ ಜಾಗಗಳಿಗೆ ಬಿಜೆಪಿ ನಾಯಕರು ಭೇಟಿ ನೀಡಿ ಪರಿಶೀಲನೆ ಕೈಗೊಂಡರು.

ಸಾರ್ವಜನಿಕರ ಸಂಕಷ್ಟಗಳನ್ನು ಆಲಿಸಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಮಳೆಯ ಕಾರಣದಿಂದ ದಿನಸಿ ಮತ್ತು ಆಹಾರ ಪದಾರ್ಥಗಳು ಹಾಳಾಗಿದ್ದವು. ಈ ಕಾರಣದಿಂದ ಬಾಧಿತರಾದ 30 ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಕಿಟ್ ಅನ್ನು ಹಂಚಿಕೆ ಮಾಡಿದರು. ಮುಂಬರುವ ದಿನಗಳಲ್ಲಿ ಮಳೆ ಬರುವ ಮುನ್ನ ಎಚ್ಚೆತ್ತುಕೊಳ್ಳುವಂತೆ ಮನವಿ ಮಾಡಿದರು.

ಸೇತುವೆ ನಿರ್ಮಾಣವಾದರೆ ಮಳೆಯಿಂದ ಪರಿಹಾರ ಸಿಗಲಿದೆ. ಅಧಿಕಾರಿಗಳು ಪರಿಹಾರ ನೀಡುವ ಕಾರ್ಯ ಮಾಡಿಲ್ಲ. ತಕ್ಷಣವೇ ಮಳೆ ಹಾನಿಯಿಂದ ನಷ್ಟ ಅನುಭವಿಸಿದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಅಧಿಕಾರಿಗಳಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಹನೂರು ಬಿಜೆಪಿ ಮುಖಂಡ ನಿಶಾಂತ್ ತಿಳಿಸಿದರು.

ಹಂಚಿಕೊಳ್ಳಿ: