ಕಸ ವಿಂಗಡನೆ ಯಂತ್ರದೊಳಗೆ ಸಿಲುಕಿ ಮಹಿಳೆ ದುರ್ಮರಣ – ಛಿದ್ರಗೊಂಡ ದೇಹ
ಚಿಕ್ಕಬಳ್ಳಾಪುರ: ಕಸ ವಿಂಗಡನೆ ಯಂತ್ರಕ್ಕೆ (Waste Segregation Machine) ಸಿಲುಕಿ ಮಹಿಳೆ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದ (Doddaballapur) ಎಂಎಸ್‌ಜಿಪಿ ಘಟಕದಲ್ಲಿ ನಡೆದಿದೆ. ಕಾಡತಿಪ್ಪೂರು ಮೂಲದ ಅರಸಮ್ಮ(45...

ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರದ (Doddaballapur) ಎಂಎಸ್‌ಜಿಪಿ ಘಟಕದಲ್ಲಿ ಕಸ ವಿಂಗಡನೆ ಯಂತ್ರಕ್ಕೆ (Waste Segregation Machine) ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಕಾಡತಿಪ್ಪೂರು ನಿವಾಸಿ ಅರಸಮ್ಮ(45) ಮೃತಪಟ್ಟ ದುರ್ದೈವಿ. ಯಂತ್ರವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅದರಲ್ಲಿ ಸಿಲುಕಿ ಅವರು ಸಾವನ್ನಪ್ಪಿದ್ದಾರೆ. ಯಂತ್ರಕ್ಕೆ ಸಿಲುಕಿದ ಪರಿಣಾಮವಾಗಿ ಮಹಿಳೆಯ ಕೈ ಹಾಗೂ ಕಾಲುಗಳು ತುಂಡಾಗಿದ್ದವು.
ಈ ಘಟಕದಲ್ಲಿ ಮಹಿಳೆಯು ಕಳೆದ ಮೂರ್ನಾಲ್ಕು ವರ್ಷಗಳಿಂದ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಕಸವನ್ನು ತಂದು ಇಲ್ಲಿ ವಿಂಗಡಣೆ ಮಾಡಲಾಗುತ್ತಿತ್ತು. ಇಂದು (ಅ.2) ಬೆಳಗ್ಗೆ ಕಸ ವಿಂಗಡಿಸುವ ಕಾರ್ಯ ನಡೆಯುತ್ತಿದ್ದಾಗ ಈ ದುರ್ಘಟನೆ ಜರುಗಿದೆ.
ದೊಡ್ಡಬೆಳವಂಗಲ ಪೋಲೀಸ್ (Police) ಠಾಣೆಯ ವ್ಯಾಪ್ತಿಯಲ್ಲಿ ಈ ಅವಘಡ ವರದಿಯಾಗಿದೆ. ಇದನ್ನೂ ಓದಿ: ಶಿಕಾರಿಗೆ ತೆರಳಿದ್ದಾಗ ಮಿಸ್‌ಫೈರ್ – ಯುವಕ ಸಾವು, ಮೂವರ ಬಂಧನ, ಮೂವರು ನಾಪತ್ತೆ




