ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕರ್ನಾಟಕ

ಟೇಬಲ್ ಕುಟ್ಟಿ ನೋಡ್ಕೊತೀನಿ ಎಂದು ಸ್ವತಃ ಬಂದು ಹೇಳಿದವರು ಶಾಸಕಿ ರೂಪಕಲಾ ಶಶಿಧರ್: ನಾರಾಯಣಸ್ವಾಮಿ

ಕೋಲಾರ: ಅವತ್ತು ಸದನದಲ್ಲಿ ಸುಬ್ಬಾರೆಡ್ಡಿ ನಾವು ತಮಾಷೆಯಾಗಿ ಮಾತನಾಡುತ್ತಿದ್ದೆವು. ರೂಪಕಲಾ ಶಶಿಧರ್‌ (Roopakala Shashidhar) ಬಗ್ಗೆ ನಾವು ಮಾತಾಡಿಲ್ಲ. ಏಕಾಏಕಿ ಬಂದು ಟೇಬಲ್ ಗುದ್ದಿ ನಿಮ್ಮನ್ನ ನೋಡಿಕೊಳ್ಳುತ್ತೇನೆ...

· ಕೋಲಾರ
ಶಾಸಕಿ ರೂಪಕಲಾ ಶಶಿಧರ್ ಅವರೇ ಬಂದು ಟೇಬಲ್ ಕುಟ್ಟಿ ನೋಡ್ಕೊತೀನಿ ಅಂದ್ರು: ನಾರಾಯಣಸ್ವಾಮಿ
ಹಂಚಿಕೊಳ್ಳಿ:

ಕೋಲಾರ: ಅಂದು ಸದನದಲ್ಲಿ ಸುಬ್ಬಾರೆಡ್ಡಿ ನಾವು ತಮಾಷೆಯಾಗಿ ಮಾತನಾಡುತ್ತಿದ್ದೆವು. ರೂಪಕಲಾ ಶಶಿಧರ್‌ (Roopakala Shashidhar) ಬಗ್ಗೆ ನಾವು ಯಾವುದೇ ಮಾತುಗಳನ್ನಾಡಿಲ್ಲ. ಏಕಾಏಕಿ ಬಂದು ಟೇಬಲ್ ಗುದ್ದಿ ನಿಮ್ಮನ್ನ ನೋಡಿಕೊಳ್ಳುತ್ತೇನೆ ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ (Bangarpet Narayanaswamy) ಹೇಳಿದ್ದಾರೆ.

ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಯಾವುದೇ ಬಣ ಬಡಿದಾಟ ಇಲ್ಲ ಎಂದು ತಿಳಿಸಿದರು. ಅಭಿವೃದ್ಧಿ ವಿಷಯವಾಗಿ ಸಿಎಂ ಬಳಿ ಚರ್ಚಿಸಿದ್ದೇವೆ, ಡಿಸಿಸಿ ಬ್ಯಾಂಕ್ ಹಗರಣದ ತನಿಖೆ ನಡೆಯಬೇಕು. ಈಗ ಎಂಡಿಯನ್ನಾಗಿ ವೆಂಕಟೇಶ್ ಅವರನ್ನ ನೇಮಿಸಿದ್ದಾರೆ, ಅವರನ್ನೇ ಮುಂದುವರಿಸಬೇಕು. ಚಿಕ್ಕಬಳ್ಳಾಪುರ ಕೋಲಾರ ಶಾಸಕರು ಒಮ್ಮತದಿಂದ ಅಧಿಕಾರಿಯ ಪರವಾಗಿದ್ದೇವೆ. ಈಗ ದಿಢೀರನೆ ಒಬ್ಬ ಶಾಸಕರು ಬಂದು ಆ ಅಧಿಕಾರಿ ಸರಿ ಇಲ್ಲ ಎಂದು ಹೇಳಿದ್ದಾರೆ ಎಂದು ವಿರೋಧಿ ಬಣಕ್ಕೆ ತಿರುಗೇಟು ನೀಡಿದರು.

ಆಕೆ ಮಾತನಾಡಿದ್ದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಆ ಶಕ್ತಿ ಅವರಿಗಿದೆ, ಅವರ ತಂದೆ ಸಂಸದರಾಗಿ ಕೇಂದ್ರ ಸಚಿವರಾಗಿದ್ದರು. ಈಗ ಅವರ ತಂದೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ, ರೂಪಕಲಾ ಶಶಿಧರ್ ಎರಡು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಶಕ್ತಿ ಇದೆ, ಅದಕ್ಕೆ ತಲೆಬಾಗಲೇಬೇಕಲ್ಲವಾ? ನಾವು ಯಾವತ್ತೂ ಅವರ ಬಣದ ಪರವಾಗಿಲ್ಲ ಎಂದು ಟಾಂಗ್ ಕೊಟ್ಟರು.

ಹಂಚಿಕೊಳ್ಳಿ: