ಸಂಪೂರ್ಣ ನಜ್ಜುಗುಜ್ಜಾಗಿ ಹೋದ ಟೋಲ್ ಪ್ಲಾಜಾ; ಡಿಕ್ಕಿ ಹೊಡೆದಿದ್ದು ಟಿಪ್ಪರ್
ವಿಜಯಪುರ: ಟೋಲ್ ಪ್ಲಾಜಾಗೆ (Toll Plaza) ಟಿಪ್ಪರ್ (Tipper) ಡಿಕ್ಕಿ ಹೊಡೆದ ಘಟನೆ ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಬಳಿಯ ಟೋಲ್ ಪ್ಲಾಜಾದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 52ರಲ್...

ವಿಜಯಪುರ: ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಸಮೀಪವಿರುವ ಟೋಲ್ ಪ್ಲಾಜಾಗೆ (Toll Plaza) ಟಿಪ್ಪರ್ (Tipper) ವಾಹನವೊಂದು ಡಿಕ್ಕಿ ಹೊಡೆದಿದೆ.
ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸ್ಥಾಪಿತವಾಗಿರುವ ಟೋಲ್ ಪ್ಲಾಜಾದಲ್ಲಿ ಈ ಅವಘಡ ಸಂಭವಿಸಿದೆ. ಈ ಟಿಪ್ಪರ್ ಡಿಕ್ಕಿಯ ರಭಸಕ್ಕೆ ಟೋಲ್ ಪ್ಲಾಜಾ ಸಂಪೂರ್ಣವಾಗಿ ಜಖಂಗೊಂಡಿದೆ. ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾಗೆ ಸೇರಿದ ಈ ಶುಲ್ಕ ಸಂಗ್ರಹಣಾ ಕೇಂದ್ರದಲ್ಲಿ ಇಂದು ನಸುಕಿನ ಜಾವ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ.
ಟಿಪ್ಪರ್ ಬಲವಾಗಿ ಡಿಕ್ಕಿ ಹೊಡೆದಿದ್ದರಿಂದ ಟೋಲ್ ಪ್ಲಾಜಾ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಈ ಘಟನೆಯಿಂದಾಗಿ ವಿಜಯಪುರ ಕಲಬುರಗಿ ನಡುವಿನ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟಿಪ್ಪರ್ ಅನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದ್ದಾರೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




