ನವರಾತ್ರಿ ಸ್ಪೆಷಲ್: ರುಚಿಕರ 'ಉಳುಂಡೊಗರೆ' ತಯಾರಿಸುವುದು ಹೇಗೆ? ಇಲ್ಲಿದೆ ಮಾಹಿತಿ
ನವರಾತ್ರಿ ಹಬ್ಬಕ್ಕೆ ಈರುಳ್ಳಿ, ಬೆಳ್ಳುಳ್ಳಿ ಬಳಸದೆ ಮಾಡುವ ವಿಶೇಷ ಉಳುಂಡೊಗರೆ (ಉದ್ದಿನ ಬೇಳೆ ರೈಸ್) ರೆಸಿಪಿ ಇದಾಗಿದೆ. ಇದು ನೋಡಲು ಪುಳಿಯೋಗರೆಯಂತೆ ಕಂಡರೂ ರುಚಿಯಲ್ಲಿ ಭಿನ್ನವಾಗಿದ್ದು, ಅತ್ಯಂತ ಪೌಷ್ಟಿಕವಾಗಿದೆ. ಕೇ...

ನವರಾತ್ರಿ ಅದೇ ಇಡ್ಲಿ, ದೋಸೆ ಬೇಡ ಬೇರೆ ಏನಾದರೂ ವಿಶೇಷ ತಿಂಡಿ ಮಾಡಲು ಬಯಸಿದ್ದರೆ ಸರಿಯಾದ ರೆಸಿಪಿ ಓದುತ್ತಿದ್ದೀರಿ. ಇದು ನೋಡೋಕೆ ಪುಳಿಯೊಗರೆ ರೀತಿ ಕಂಡರೂ ಪುಳಿಯೋಗರೆ ಅಲ್ಲ. ಇದರ ರುಚಿಯೇ ಬೇರೆ. ಪುಳಿಯೊಗರೆಯಂತೆ ಕಾಣುವ ಇದು ಉಳುಂಡೊಗರೆ. ಅಂದರೆ ಹುರಿದ ಉದ್ದಿನ ಬೇಳೆ ರೈಸ್. ಇದು ತುಂಬಾ ರುಚಿಕರ ಅಷ್ಟೇ ಅಲ್ಲ, ತುಂಬಾ ಪೌಷ್ಟಿಕವಾಗಿದೆ. ತೆಂಗಿನಕಾಯಿ, ಸಿಂಪಲ್ ಒಗ್ಗರಣೆ ಬಳಸಿ ಇದನ್ನು ಕೆಲವು ನಿಮಿಷಗಳಲ್ಲಿ ತಯಾರಿಸಬಹುದು.
ಈ ವಿಶೇಷ ತಿಂಡಿ ಹೇಗೆ ಮಾಡಬೇಕು ಎಂಬುದನ್ನು 'Kannada veg recipe ನಲ್ಲಿ ಲತಾ ಎಂಬುವವರು ಹಂಚಿಕೊಂಡಿದ್ದಾರೆ. ನಾವಿಲ್ಲಿ ಅವರು ಹೇಗೆ ಸಿದ್ಧಪಡಿಸುತ್ತಾರೆ ಎಂಬುದನ್ನು ನಿಮಗೆ ತಿಳಿಸುತ್ತೇವೆ. ಉದ್ದಿನ ಬೇಳೆ ರೈಸ್ ನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದೆಯೂ ತಯಾರಿಸಬಹುದು. ರೆಸಿಪಿಗೆ ಹೆಚ್ಚಿನ ಪದಾರ್ಥಗಳೂ ಕೂಡ ಬೇಕಿಲ್ಲ. ತಯಾರಿಸಲು ತುಂಬಾ ಸುಲಭ, ರುಚಿ ಅನುಭವಿಸಿಯೇ ಹೇಳಬೇಕು.
ಉದ್ದಿನ ಬೇಳೆ ರೈಸ್ ಗೆ ಬೇಕಾಗುವ ಪದಾರ್ಥಗಳು (Ulundogare recipe)
(ಅಳತೆ ಕಪ್ = 240 ಮಿಲಿ)
1/2 ಕಪ್ ಅಕ್ಕಿ (ನಾನು ಸೋನಾ ಮಸೂರಿ ಬೆಸ್ಟ್)
1/4 ಕಪ್ ತುರಿದ ತೆಂಗಿನಕಾಯಿ
4 ಟೀಸ್ಪೂನ್ ಉದ್ದಿನ ಬೇಳೆ
2 - 4 ಕೆಂಪು ಮೆಣಸಿನಕಾಯಿ
1/2 ಟೀಸ್ಪೂನ್ ಕರಿಮೆಣಸು
1/4 ಟೀಸ್ಪೂನ್ ತುಪ್ಪ
ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
2 ಚಮಚ ತುಪ್ಪ ಅಥವಾ ಎಣ್ಣೆ
1/2 ಟೀಸ್ಪೂನ್ ಸಾಸಿವೆ
ಸ್ವಲ್ಪ ಗೋಡಂಬಿ
4-6 ಕರಿಬೇವು ಎಲೆಗಳು
ಕುಕ್ಕರ್‌ನಲ್ಲಿ ಅಕ್ಕಿಯನ್ನು ತೆಗೆದುಕೊಂಡು ಎರಡು ಬಾರಿ ಚೆನ್ನಾಗಿ ತೊಳೆಯಿರಿ.
- ಅಗತ್ಯವಿರುವ ನೀರು ಮತ್ತು 1/4 ಚಮಚ ತುಪ್ಪ ಸೇರಿಸಿ.
- ಮೃದು ಅಥವಾ ಮೆತ್ತಗಾಗುವವರೆಗೆ ಬೇಯಿಸಿ. ಬೇಯಿಸಿದ ಅನ್ನವನ್ನು ಫ್ಲಫ್ ಮಾಡಿ ಪಕ್ಕಕ್ಕೆ ಇರಿಸಿ.
- ಈಗ ಒಂದು ಪ್ಯಾನ್ ನಲ್ಲಿ ಉದ್ದಿನ ಬೇಳೆ, ಕರಿಮೆಣಸು ಮತ್ತು ಕೆಂಪು ಮೆಣಸಿನಕಾಯಿಗಳನ್ನು ತೆಗೆದುಕೊಳ್ಳಿ.
- ಉದ್ದಿನ ಬೇಳೆ ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ. ತಣ್ಣಗಾಗುವವರೆಗೆ ಕಾಯಿರಿ ಮತ್ತು ಅರೆ-ನುಣ್ಣಗೆ ಪುಡಿ ಮಾಡಿ. ಪಕ್ಕಕ್ಕೆ ಇರಿಸಿ.
- ಸಾಸಿವೆ ಸಿಡಿಯುವವರೆಗೆ ಕಾಯಿರಿ, ಈಗ ಗೋಡಂಬಿ ಸೇರಿಸಿ ಹುರಿಯಿರಿ.
- ನಂತರ ಕರಿಬೇವು ಮತ್ತು ತೆಂಗಿನಕಾಯಿ ತುರಿ ಸೇರಿಸಿ ಸ್ವಲ್ಪ ಹೊತ್ತು ಹುರಿದು ಒಲೆ ಆಫ್ ಮಾಡಿ.
- ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಮಸಾಲೆ ಪುಡಿಯನ್ನು ಸೇರಿಸಿ.
ಚೆನ್ನಾಗಿ ಕಲಕಿದರೆ ರುಚಿರುಚಿಯಾದ ಉದ್ದಿನ ಬೇಳೆ ರೈಸ್ ರೆಡಿ.. ಬಿಸಿಯಾಗಿದ್ದಾಗಲೇ ತಿನ್ನಿ, ಮತ್ತೆ ಮತ್ತೆ ತಿನ್ನಿಬೇಕು ಅನಿಸುವಷ್ಟು ರುಚಿಯಾಗಿರುತ್ತದೆ. ಇದರ ವಿಶೇಷವೆಂದರೆ ಕೆಲವೇ ಸಮಯಗಳಲ್ಲಿ ಸಿದ್ಧಪಡಿಸಬಹುದು. ನವರಾತ್ರಿ ಹಬ್ಬದ ವೇಳೆ ಬೆಳಗಿನ ತಿಂಡಿಯಾಗಿ ಮಾಡಬಹುದು. ದಿನನಿತ್ಯದ ಅವಸರದ ವೇಳೆ ಇಡ್ಲಿ ದೋಸೆ ಬದಲು ಉದ್ದಿನ ಬೇಳೆ ರೈಸ್ ಮಾಡಬಹುದು.




