ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ವಿಧಿವಶ!
ನವದೆಹಲಿ: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಇಂದು ಗುರುವಾರ ಮುಂಜಾನೆ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾದರು. ಪಣಜಿ ಸಮೀಪದ ಡೋನಾ... The post ಬಾಲಿವುಡ್ ಹಿರಿಯ ನಟ, ನಾನಾ ಪಾಟೇಕರ್ ಇನ್ನಿಲ್ಲ first appeared o...

ನವದೆಹಲಿ: ಜನಪ್ರಿಯ ಬಾಲಿವುಡ್ ನಟ ನಾನಾ ಪಾಟೇಕರ್ ಅವರು ಇಂದು ಗುರುವಾರ ಮುಂಜಾನೆ ಗೋವಾದಲ್ಲಿ ಹೃದಯಾಘಾತದಿಂದ ವಿಧಿವಶರಾದರು.
ಪಣಜಿ ಬಳಿಯ ಡೋನಾ ಪೌಲಾದಲ್ಲಿನ ತಮ್ಮ ನಿವಾಸದಲ್ಲಿ 75 ವರ್ಷದ ನಟ ಅಸ್ವಸ್ಥರಾಗಿ ಬಿದ್ದಿದ್ದಾಗ, ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
45 ನಿಮಿಷಗಳ ಕಾಲ ನಿರಂತರವಾಗಿ ಸಿಪಿಆರ್ (CPR) ಚಿಕಿತ್ಸೆ ನೀಡಿದರೂ ನಾನಾ ಪಾಟೇಕರ್ ಅವರನ್ನು ಉಳಿಸಿಕೊಳ್ಳಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಇಂದು ನಸುಕಿನ ಜಾವ 5:10ರ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಈ ಸಂಬಂಧ ವೈದ್ಯಕೀಯ-ಕಾನೂನು ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕೈಗೊಳ್ಳಲಿದ್ದಾರೆ.




