2 ಚಿರತೆ, 1 ಸಿಂಹವನ್ನು ದತ್ತು ಪಡೆದ ಸತೀಶ್ ಜಾರಕಿಹೊಳಿ ಅವರ ಪುತ್ರ!
ಬೆಳಗಾವಿ: ತಮ್ಮ ಜನ್ಮದಿನದ ಹಿನ್ನೆಲೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಪುತ್ರ ರಾಹುಲ್ ಅವರು ಎರಡು ಚಿರತೆ, ಒಂದು ಸಿಂಹವನ್ನು ದತ್ತು ಪಡೆದಿದ್ದಾರೆ. 27ರ ರಾಹುಲ್ ಜಾರಕಿಹೊಳಿ (Rahul Jarkiholi), ವ...

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಪುತ್ರ ರಾಹುಲ್ ಅವರು ತಮ್ಮ ಜನ್ಮದಿನದ ಅಂಗವಾಗಿ ಎರಡು ಚಿರತೆ ಹಾಗೂ ಒಂದು ಸಿಂಹವನ್ನು ದತ್ತು ಸ್ವೀಕರಿಸಿದ್ದಾರೆ.
27ರ ರಾಹುಲ್ ಜಾರಕಿಹೊಳಿ (Rahul Jarkiholi) ವನ್ಯಜೀವಿಗಳ ಪಾಲನೆಗೆ ಕೈಜೋಡಿಸಿದ್ದಾರೆ. ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸುವ ಸಲುವಾಗಿ ಅವರು ಸಿಂಹ ಮತ್ತು ಚಿರತೆಯನ್ನು ದತ್ತು ಪಡೆದಿದ್ದಾರೆ.
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಕಿರು ಮೃಗಾಲಯದಲ್ಲಿರುವ ಸಿಂಹ ಮತ್ತು ಚಿರತೆಗಳಿಗೆ ಸಚಿವರ ಪುತ್ರ ಆಸರೆಯಾಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ರಾಹುಲ್ ವಿಶಿಷ್ಟವಾಗಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.




