ದಕ್ಷಿಣ ಕನ್ನಡ: ಹೆಸರೇ ಮುಂದುವರಿಯಬೇಕು, ಇದು ನಮ್ಮ ಅಸ್ಮಿತೆಯ ಪ್ರತೀಕ – ಅನನ್ಯ
ತುಳು, ಕನ್ನಡ, ಕೊಂಕಣಿ ಸೇರಿದಂತೆ ಹಲವು ಭಾಷಾ ಸಮುದಾಯಗಳ ಸಹಬಾಳ್ವೆ ಇಲ್ಲಿನ ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದೆ. ಧಾರ್ಮಿಕ ಕ್ಷೇತ್ರಗಳು, ಜನಪದ ಕಲೆಗಳು, ಕೃಷಿ ಪರಂಪರೆ ಹಾಗೂ ವಿಶಿಷ್ಟ ಕರಾವಳಿ ಜೀವನಶೈಲಿ ದಕ್ಷಿಣ ಕನ್ನ...

ತುಳು, ಕನ್ನಡ, ಕೊಂಕಣಿ ಸೇರಿದಂತೆ ಹಲವು ಭಾಷಾ ಸಮುದಾಯಗಳ ಸಹಬಾಳ್ವೆ ಇಲ್ಲಿನ ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದೆ. ಧಾರ್ಮಿಕ ಕ್ಷೇತ್ರಗಳು, ಜನಪದ ಕಲೆಗಳು, ಕೃಷಿ ಪರಂಪರೆ ಹಾಗೂ ವಿಶಿಷ್ಟ ಕರಾವಳಿ ಜೀವನಶೈಲಿ ದಕ್ಷಿಣ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಪರಂಪರೆಯನ್ನು ಗೌರವಿಸುತ್ತಾ, ಆಧುನಿಕತೆಯತ್ತ ದೃಢ ಹೆಜ್ಜೆ ಇಡುತ್ತಿರುವ ದಕ್ಷಿಣ ಕನ್ನಡವು ನಾಡಿನ ಹೆಮ್ಮೆಯ ಪ್ರತೀಕ. ದಕ್ಷಿಣ ಕನ್ನಡ ಎಂಬುದು ಕೇವಲ ಒಂದು ಹೆಸರು ಅಲ್ಲ ಅದು ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತೀಕ. ಆದ್ದರಿಂದ ದಕ್ಷಿಣ ಕನ್ನಡ ಹೆಸರೇ ಮುಂದುವರಿಯಬೇಕು.
ಅನನ್ಯ ಎಚ್, ಸುಬ್ರಹ್ಮಣ್ಯ ವಿದ್ಯಾರ್ಥಿನಿ
ದಕ್ಷಿಣ ಕನ್ನಡ ಎಂಬ ಹೆಸರು ಮಂಗಳೂರು, ಪುತ್ತೂರು, ಸುಳ್ಯ, ಕಡಬ, ಮೂಡುಬಿದಿರೆ, ಬೆಳ್ತಂಗಡಿ, ಮುಲ್ಕಿ, ಉಳ್ಳಾಲ, ಧರ್ಮಸ್ಥಳ ಸೇರಿದಂತೆ ಹಲವು ಪ್ರದೇಶಗಳನ್ನು ಒಗ್ಗೂಡಿಸುತ್ತದೆ. ಇಲ್ಲಿ ಎಲ್ಲರೂ ತುಳು ಮಾತನಾಡದಿದ್ದರೂ, ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತಾರೆ. ಜಿಲ್ಲೆಯ ಹೆಸರನ್ನು ಬದಲಾಯಿಸಿದರೆ ಆಡಳಿತಾತ್ಮಕ ವೆಚ್ಚ ಹೆಚ್ಚಾಗುವುದರ ಜೊತೆಗೆ, ವಿವಿಧ ತಾಲ್ಲೂಕುಗಳಿಂದ ಪ್ರತ್ಯೇಕ ಜಿಲ್ಲೆಯ ಸ್ಥಾನಮಾನಕ್ಕಾಗಿ ಬೇಡಿಕೆಗಳು ಹೆಚ್ಚಾಗುವ ಸಾಧ್ಯತೆಯೂ ಇದೆ. ಆದ್ದರಿಂದ, ಭಾಷೆ ಅಥವಾ ಪ್ರಾದೇಶಿಕ ಗುರುತಿನ ಆಧಾರದ ಮೇಲೆ ಹೆಸರು ಬದಲಾಯಿಸುವ ಬದಲು, ಎಲ್ಲರನ್ನು ಒಳಗೊಂಡಿರುವ ಐತಿಹಾಸಿಕ ದಕ್ಷಿಣ ಕನ್ನಡ ಎಂಬ ಹೆಸರನ್ನು ಉಳಿಸಿಕೊಳ್ಳುವುದು ಸೂಕ್ತ.




