ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಧಾರವಾಡ ಕೋರ್ಟ್‌ ಆವರಣದಲ್ಲೇ ಪೊಲೀಸರ ಕಣ್ತಪ್ಪಿಸಿ ಪೇರಿ ಕಿತ್ತ ರೌಡಿಶೀಟರ್‌

ಧಾರವಾಡ: ಇಲ್ಲಿನ (Dharwad) ಜಿಲ್ಲಾ ನ್ಯಾಯಾಲಯದ (Court) ಆವರಣದಲ್ಲಿ ನಟೋರಿಯಸ್ ರೌಡಿಶೀಟರ್‌ (Rowdy Sheeter) ಒಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಅರಬಾಝ್ ದೊಡಮನಿ ಪೊಲೀಸರಿಂದ ತಪ್ಪಿಸಿಕ...

· ಧಾರವಾಡ
ಧಾರವಾಡ ಕೋರ್ಟ್‌ ಆವರಣದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ರೌಡಿಶೀಟರ್‌
ಹಂಚಿಕೊಳ್ಳಿ:

ಧಾರವಾಡ: Dharwad ಜಿಲ್ಲಾ ನ್ಯಾಯಾಲಯದ Court ಆವರಣದಿಂದ ಕುಖ್ಯಾತ Rowdy Sheeter ಒಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ಜರುಗಿದೆ.

ಪೊಲೀಸರ ವಶದಿಂದ ನುಣುಚಿಕೊಂಡು ಪರಾರಿಯಾದ Rowdy Sheeter ನನ್ನು ಅರಬಾಝ್ ದೊಡಮನಿ ಎಂದು ಗುರುತಿಸಲಾಗಿದೆ. ಈತ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಿದ್ದ ಸಂದರ್ಭದಲ್ಲಿ, ತನಗೆ ಟೀ ಕುಡಿಯಬೇಕೆಂದು ಪೊಲೀಸರ ಬಳಿ ಮನವಿ ಮಾಡಿದ್ದ. ಟೀ ಅಂಗಡಿಗೆ ಕರೆದೊಯ್ದಾಗ, ಟೀ ಕುಡಿಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ತನ್ನ ಕೈಗೆ ಹಾಕಿದ್ದ ಬೇಡಿಯನ್ನು ತೆಗೆಯುವಂತೆ ಕೇಳಿದ್ದ. ಇದನ್ನೂ ಓದಿ: CNG ತುಂಬಿಸುವಾಗ ಕಾರಿನ ಸಿಲಿಂಡರ್ ಸ್ಫೋಟ – ಕಾರು ಛಿದ್ರ ಛಿದ್ರ

ಬೇಡಿಯನ್ನು ಬಿಚ್ಚುತ್ತಿದ್ದಂತೆಯೇ, ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಬೈಕ್‌ನಲ್ಲಿ ಆತ ಪರಾರಿಯಾಗಿದ್ದಾನೆ. ಅರಬಾಝ್ ವಿರುದ್ಧ ಹಲ್ಲೆ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ ಪೊಲೀಸರು ಆತನನ್ನು ಬಂಧಿಸಿದ್ದರು.

ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪರಾರಿಯಾದ ಆರೋಪಿಯ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಂಧ್ರದ ಔಷಧ ತಯಾರಿಕಾ ಘಟಕದಲ್ಲಿ ಬಾಯ್ಲರ್ ಸ್ಫೋಟ – ನಾಲ್ವರು ಸಾವು

ಹಂಚಿಕೊಳ್ಳಿ: