ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಹೆಬ್ರಿ ವಿಪ್ರ ಬಾಂಧವರಿಂದ ಪಾದಯಾತ್ರೆಗೆ ಚಾಲನೆ!

ಹೆಬ್ರಿ ಪಾದಯಾತ್ರೆ ಸಮಿತಿಯ ವಿಪ್ರರು ಲೋಕಕಲ್ಯಾಣಕ್ಕಾಗಿ ಸತತ 9ನೇ ವರ್ಷ ಹೆಬ್ರಿ ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಯಿಂದ ಉಡುಪಿ ಶ್ರೀಕೃಷ್ಣನ ಸನ್ನಿಧಿಗೆ ವಿಷ್ಣು ಸಹಸ್ರನಾಮ ಸ್ತೋತ್ರ, ಕೃಷ್ಣ ಮಂತ್ರ ಜಪ, ಲಕ್ಷೀಶೋಭಾನ...

· ಉಡುಪಿ
ಹೆಬ್ರಿ ವಿಪ್ರ ಬಾಂಧವರಿಂದ ಪಾದಯಾತ್ರೆ.
ಹಂಚಿಕೊಳ್ಳಿ:

ಹೆಬ್ರಿ ಪಾದಯಾತ್ರೆ ಸಮಿತಿಯ ವಿಪ್ರರು ಲೋಕ ಕಲ್ಯಾಣದ ಉದ್ದೇಶದಿಂದ ಸತತ 9ನೇ ವರ್ಷ ಹೆಬ್ರಿ ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಯಿಂದ ಉಡುಪಿ ಶ್ರೀಕೃಷ್ಣನ ಸನ್ನಿಧಿವರೆಗೆ ವಿಷ್ಣು ಸಹಸ್ರನಾಮ ಸ್ತೋತ್ರ, ಕೃಷ್ಣ ಮಂತ್ರ ಜಪ ಮತ್ತು ಲಕ್ಷೀಶೋಭಾನೆ ಪಠಿಸುತ್ತಾ, ಸುಮಾರು 25ಕ್ಕೂ ಅಧಿಕ ವಿಪ್ರ ಬಾಂಧವರು ಗಿಲ್ಲಾಳಿ ವಿದ್ವಾನ್ ವಿಷ್ಣು ಮೂರ್ತಿ ಆಚಾರ್ಯರ ಮಾರ್ಗದರ್ಶನದಲ್ಲಿ ಪಾದಯಾತ್ರೆ ಕೈಗೊಂಡರು.

ಈ ವೇಳೆ ವಡ್ಡಮೇಶ್ವರ ಮಠದ ನವನೀತ ಕೃಷ್ಣ ದೇವರ ಸನ್ನಿಧಿ, ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿ ಹಾಗೂ ಪುತ್ತಿಗೆ ಮಠದ ನರಸಿಂಹ ಮತ್ತು ವಿಠ್ಠಲ ದೇವರ ಸನ್ನಿಧಿಗಳಿಗೆ ಭೇಟಿ ನೀಡಿ, ಅಂತಿಮವಾಗಿ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ಸನ್ನಿಧಿಯಲ್ಲಿ ಪಾದಯಾತ್ರಾರ್ಥಿಗಳು ಭಜನೆ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣದೊಂದಿಗೆ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು.

ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥರು ಆಶೀರ್ವಚನ ನೀಡುತ್ತಾ, ಭಗವಂತನ ಅನುಗ್ರಹ ಪಡೆಯಲು ಋಷಿ ಮುನಿಗಳು ವಿವಿಧ ಮಾರ್ಗಗಳನ್ನು ಸೂಚಿಸಿದ್ದಾರೆ ಎಂದು ನುಡಿದರು. ಕಲಿಯುಗದಲ್ಲಿ ಶಾಸ್ತ್ರೋಕ್ತವಾದ ದೇಹದಂಡನೆ ಮತ್ತು ಉಪವಾಸದ ಕ್ರಮಗಳನ್ನು ವಿವರಿಸಿದ ಅವರು, ಸಾಧನಾ ಶರೀರದ ಮೂಲಕ ಭಗವಂತನ ಆರಾಧನೆ ಮಾಡುವುದು ಮತ್ತು ಪಾದಯಾತ್ರೆಯ ಮೂಲಕ ದೇವರ ದರ್ಶನ ಪಡೆಯುವುದು ಅತ್ಯಂತ ಮಹತ್ವದ್ದು ಎಂದು ತಿಳಿಸಿದರು. ಈ ಮೂಲಕ ಲೋಕ ಕಲ್ಯಾಣ ಮತ್ತು ಸನಾತನ ಧರ್ಮದ ರಕ್ಷಣೆ ನೆರವೇರಲಿ ಎಂದು ಅವರು ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಹೆಬ್ರಿ ಭಾಗದ ವಿಪ್ರರಾದ ಸುದರ್ಶನ ಜೋಯಿಸ್, ಪ್ರಕಾಶ್ ಭಟ್, ವೆಂಕಟರಮಣ ಕಲ್ಕೂರ್, ನರಸಿಂಹ ಹೇರಳೆ, ಸುಬ್ರಹ್ಮಣ್ಯ ಆಚಾರ್ಯ, ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ, ವಿದ್ಯಾಲಕ್ಷ್ಮೀ ಆಚಾರ್ಯ, ರಾಘವೇಂದ್ರ ಭಟ್ ಉಪ್ಪಳ, ಪ್ರಶಾಂತ ಭಟ್ ಹಾಗೂ ಪುಟಾಣಿಗಳಾದ ಸುಮಧ್ವ ಮತ್ತು ಮಹತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ: