ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಮೈಸೂರು ದಸರಾ ಮಾರ್ಗಸೂಚಿ, ಈ ಸ್ಥಳದಲ್ಲಿ ನಿಂತು ಜಂಬಾ ಸವಾರಿ ವೀಕ್ಷಣೆ ಮಾಡುವಂತಿಲ್ಲ

ಮೈಸೂರು ದಸರಾಗೆ ತೆರಳುವ ಜನರಿಗೆ ನಗರ ಪೊಲೀಸ್ ಕೆಲ ಮಹತ್ವದ ಸೂಚನೆ ನೀಡಿದೆ. ಜಂಬು ಸವಾರಿ ವೀಕ್ಷಣೆಗೆ ಕೆಲ ನಿರ್ಬಂಧಗಳಿವೆ. ಎಲ್ಲೆಂದರಲ್ಲಿ ನಿಂತು ಜಂಬು ಸವಾರಿ ನೋಡುವಂತಿಲ್ಲ. 92ಕ್ಕೂ ಹೆಚ್ಚು ಕಡೆಗಳಲ್ಲಿ ಜಂಬು ಸವಾರಿ...

· ಮೈಸೂರು
ಮೈಸೂರು ದಸರಾ ಮಾರ್ಗಸೂಚಿ, ಈ ಸ್ಥಳದಲ್ಲಿ ನಿಂತು ಜಂಬಾ ಸವಾರಿ ವೀಕ್ಷಣೆ ಮಾಡುವಂತಿಲ್ಲ
ಹಂಚಿಕೊಳ್ಳಿ:

ಮೈಸೂರು (ಅ.09) ಮೈಸೂರು ದಸರಾಗೆ ಅಂತಿಮ ಹಂತದ ತಯಾರಿಗಳು ನಡೆಯುತ್ತಿದೆ. ಜುಂಬು ಸವಾರಿಗೆ ಆನೆಗಳ ತಾಲೀಮು ನಡೆಯುತ್ತಿದೆ. ಇದರ ನಡುವೆ ನಗರ ಪೊಲೀಸ್ ಕೆಲ ಮಾರ್ಗಸೂಚಿ ಪ್ರಕಟಿಸಿದೆ. ಮೈಸೂರು ದಸರಾಗೆ ಆಗಮಿಸುವ ಜನರು ಕೆಲ ಕಟ್ಟು ನಿಟ್ಟಿನ ಸೂಚನೆ ಪಾಲಿಸಬೇಕು. ಇಷ್ಟೇ ಅಲ್ಲ ಎಲ್ಲೆಂದರಲ್ಲಿ ನಿಂತು ಜುಂಬು ಸವಾರಿ ವೀಕ್ಷಣೆ ಮಾಡಲು ಅವಕಾಶವಿಲ್ಲ. 92ಕ್ಕೂ ಹೆಚ್ಚು ಕಡೆಗಳಲ್ಲಿ ಜಂಬು ಸವಾರಿ ವೀಕ್ಷಣೆಗೆ ಅನುಮತಿ ನಿರಾಕರಿಸಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಹತ್ವದ ಸೂಚನೆ ನೀಡಿದ್ದಾರೆ.

92 ಕಟ್ಟಡ ಸೇರಿದಂತೆ ಕೆಲವೆಡೆ ಜಂಬು ಸವಾರಿ ವೀಕ್ಷಣೆಗೆ ನಿರ್ಬಂಧ

ಜಂಬು ಸವಾರಿ ವೇಳೆ ಜನಸಂದಣಿ ಹೆಚ್ಚಿರಲಿದೆ. ಹೀಗಾಗಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜಂಬು ಸವಾರಿ ವೀಕ್ಷಣೆಗೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿರುವ ಕಟ್ಟಡ, ಮರಗಳು, ಮನೆಗಳ ಮೇಲೆ ನಿಂತು ನೋಡಲಾಗುತ್ತದೆ. ಈ ಬಾರಿ ಶಿಥಿಲ ಕಟ್ಟಡ, ಹಳೇ ಕಟ್ಟಡ, ಮರಗಳ ಮೇಲೆ ಕುಳಿತು ಜಂಬು ಸವಾರಿ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಈಗಾಗಲೇ ಜಂಬು ಸವಾರಿ ಸಾಗುವ ಮಾರ್ಗದಲ್ಲಿರುವ 92ಕ್ಕೂ ಹೆಚ್ಚು ಹಳೇ ಕಟ್ಟಡಗಳನ್ನು ಗುರುತು ಮಾಡಲಾಗಿದೆ. ಈ ಕಟ್ಟಡಗಳ ಮೇಲೆ, ಹಳೇ ಮನೆಗಳ ಮೇಲೆ , ಬಾಲ್ಕನಿ ಮೇಲೆ, ಮರಗಳ ಮೇಲೆ ಜಂಬು ಸವಾರಿ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ಹೆಚ್ಚಿನ ಜನರು ಒಂದೆ ಕಟ್ಟಡ, ಬಾಲ್ಕನಿಗಳಲ್ಲಿ ನಿಂತು ಜಂಬು ಸವಾರಿ ವೀಕ್ಷಣೆ ಮಾಡುವುದರಿಂದ ಅಪಾಯದ ಸಾಧ್ಯತೆಗಳು ಹೆಚ್ಚಾಗಿದೆ. ಹೀಗಾಗಿ ಪೊಲೀಸರು ಮುನ್ನಚ್ಚೆರಿಕೆ ವಹಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹದ್ದಿನ ಕಣ್ಣು

ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಸುಳ್ಳು ಸುದ್ದಿ, ಪ್ರಚೋದನೆ, ಧಾರ್ಮಿಕ ಕಾರ್ಯಕ್ರಮ, ಸಂಪ್ರದಾಯಗಳಿಗೆ ಅಪಮಾನ ಮಾಡುವ ಯಾವುದೇ ಪೋಸ್ಟ್‌ಗಳಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೀಮಾ ಲಾಟ್ಕರ್ ಎಚ್ಚರಿಸಿದ್ದಾರೆ.

ತುರ್ತು ಸಂದರ್ಭದಲ್ಲಿ 112 ಸಹಾಯವಾಣಿ

ಯಾವುದೇ ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಲು ಸೀಮಾ ಲಾಟ್ಕರ್ ಮನವಿ ಮಾಡಿದ್ದಾರೆ. ಮೈಸೂರು ಸುತ್ತ ಮುತ್ತ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲ ಎಂದಿದ್ದಾರೆ.

ನಾಡಹಬ್ಬ ಮೈಸೂರು ದಸರಾಗೆ ಈ ಬಾರಿ 6 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. 5161ಸಿವಿಲ್ ಹಾಗೂ ಸಂಚಾರಿ ಪೊಲೀಸರು, 33 ಕೆಎಸ್ಆರ್ಪಿ ತುಕಡಿ, 25 ಕಾರ್ ಮತ್ತು ಡಿಎಆರ್ ತುಕಡಿ, 24 ಎಎಸ್ ಸಿ ತುಕಡಿ, 1500 ಹೋಮ್ ಗಾರ್ಡ್‌ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗುತ್ತಿದೆ. ದಸರಾದ 11 ದಿನಗಳು ಒಟ್ಟು 18 ಪೊಲೀಸ್ ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಅರಮನೆ ಸುತ್ತಮುತ್ತದ ಪ್ರಮುಖ ರಸ್ತೆಗಳಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್ ನಿಯಮ ಕಟ್ಟು ನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ. 35794 ಸಿಸಿಟಿವಿಗಳ ಮೂಲಕ ಮೈಸೂರಿನ ಇಡೀ ಚಲನವಲಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ.

ಹಂಚಿಕೊಳ್ಳಿ: