ಮೈಸೂರು | ಕೇವಲ 4 ದಿನದಲ್ಲೇ ಕುಸಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್!
ಮೈಸೂರು: ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ ಕಟೌಟ್ (Dasara Lightings Cutout) ಏಕಾಏಕಿ ಮುರಿದು ಬಿದ್ದಿದೆ. ಟಿಟಿ ವಾಹನದ ಮೇಲೆ ವಿದ್ಯುತ್ ದೀಪಾಲಂಕಾರದ (Dasara Lightings) ಕಟೌಟ್ ಬಿ...

ಮೈಸೂರು: ನಗರದ ಗನ್ ಹೌಸ್ ವೃತ್ತದಲ್ಲಿ ಸ್ಥಾಪಿಸಲಾಗಿದ್ದ ದಸರಾ ದೀಪಾಲಂಕಾರದ ಕಟೌಟ್ (Dasara Lightings Cutout) ಅನಿರೀಕ್ಷಿತವಾಗಿ ಧರೆಗುರುಳಿದೆ.
ಈ ವಿದ್ಯುತ್ ದೀಪಾಲಂಕಾರದ (Dasara Lightings) ಕಟೌಟ್ ಟಿಟಿ ವಾಹನದ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಮತ್ತು ಗುತ್ತಿಗೆದಾರ ಮೋಹನ್ ಅವರ ನಿರ್ಲಕ್ಷ್ಯವೇ ಈ ಕಟೌಟ್ ಮುರಿದು ಬೀಳಲು ಕಾರಣವೆಂದು ಆರೋಪಿಸಲಾಗಿದೆ. ಬೃಹತ್ ಲೈಟ್ ಕಟೌಟ್ ಅನ್ನು ನಿಲ್ಲಿಸಲು ಕೇವಲ ಅರ್ಧ ಅಡಿ ಗುಂಡಿ ತೋಡಿ ಕಂಬವನ್ನು ಅಳವಡಿಸಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಟ್ರೆಕ್ಕಿಂಗ್ ವೇಳೆ ಈಜಲು ಹೋದ ಟೆಕ್ಕಿ ನಾಪತ್ತೆ
ಕಟೌಟ್ ಅಳವಡಿಸಿದ ಕೇವಲ ನಾಲ್ಕೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. ವಿದ್ಯುತ್ ದೀಪಾಲಂಕಾರದ ಕಟೌಟ್ ನೆಲಕ್ಕೆ ಬಿದ್ದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ




