ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ – ಕೆ.ವೆಂಕಟೇಶ್ ಭೇಟಿ; ಅಕ್ಕಪಕ್ಕ ಕುಳಿತರೂ ಮೌನವೇ ಮೌನ..!
– ಸಿದ್ದರಾಮಯ್ಯ, ಮಹದೇವಪ್ಪ ನಡುವೆ ಮುನಿಸು ಮೈಸೂರು: ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಸಿದ್ದರಾಮಯ್ಯ (Siddaramaiah) ಹಾಗೂ ಅವರ ಆಪ್ತರಾಗಿದ್ದ ಮಾಜಿ ಸಚಿವ ಕೆ.ವೆಂಕಟೇಶ್ (K Venkatesh) ಒಂದೇ ವೇದಿಕೆಯಲ್ಲಿ ಕಾಣಿಸ...

ಸಿದ್ದರಾಮಯ್ಯ, ಮಹದೇವಪ್ಪ ನಡುವೆ ಮುನಿಸು
ಮೈಸೂರು: ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರ ಸಿದ್ದರಾಮಯ್ಯ (Siddaramaiah) ಹಾಗೂ ಅವರ ಆಪ್ತ ವಲಯದಲ್ಲಿದ್ದ ಮಾಜಿ ಸಚಿವ ಕೆ.ವೆಂಕಟೇಶ್ (K Venkatesh) ಒಂದೇ ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಸಚಿವ ಸ್ಥಾನ ಕೈತಪ್ಪಿದ ಕಾರಣಕ್ಕೆ ಸಿದ್ದರಾಮಯ್ಯ ಅವರ ಮೇಲೆ ಅಸಮಾಧಾನಗೊಂಡಿದ್ದ ಕೆ.ವೆಂಕಟೇಶ್, ಕಳೆದ ಕೆಲವು ದಿನಗಳಿಂದ ಅವರಿಂದ ದೂರ ಉಳಿದಿದ್ದರು. ಆದರೆ ಇದೀಗ ಮೈಸೂರಿನಲ್ಲಿ (Mysuru) ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಇಬ್ಬರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಮೈಸೂರು ಜಿಲ್ಲಾ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸಿದ್ದರಾಮಯ್ಯ ಹಾಗೂ ಕೆ.ವೆಂಕಟೇಶ್ ಇಬ್ಬರೂ ಪಾಲ್ಗೊಂಡಿದ್ದರು. ಇಬ್ಬರೂ ಪಕ್ಕಪಕ್ಕದಲ್ಲಿ ಕುಳಿತಿದ್ದರೂ ಪರಸ್ಪರ ಮಾತನಾಡಲಿಲ್ಲ.
ಮತ್ತೊಂದೆಡೆ, ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಮತ್ತೊಬ್ಬ ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ಸಿದ್ದು ಜೊತೆಗಿನ ಮುನಿಸನ್ನು ಮುಂದುವರಿಸಿದ್ದಾರೆ. ಹಿಂದೆಲ್ಲಾ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿದಾಗಲೆಲ್ಲ ಅವರ ಜೊತೆಯಲ್ಲೇ ಇರುತ್ತಿದ್ದ ಮಹದೇವಪ್ಪ, ಈ ಬಾರಿ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ.




