ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಸೌಜನ್ಯ ಅತ್ಯಾಚಾರ & ಕೊಲೆ ಕೇಸ್;‌ ತನಿಖೆಯ ಹೊಣೆ ಹೊತ್ತ ಹಿರಿಯ IPS ಅಧಿಕಾರಿ!

ಬೆಂಗಳೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಓರ್ವ ಹಿರಿಯ ಐಪಿಎಸ್ ಅಧಿಕಾರಿ ನೇಮಕ ಮಾಡಲಾಗಿದೆ. ಲೋಕೇಶ್ ಬಿ ಜ...

· ದಕ್ಷಿಣ ಕನ್ನಡ
ಸೌಜನ್ಯ ಅತ್ಯಾಚಾರ & ಕೊಲೆ ಕೇಸ್;‌ ತನಿಖಾಧಿಕಾರಿಯಾಗಿ ಓರ್ವ ಹಿರಿಯ IPS ಅಧಿಕಾರಿ ನೇಮಕ
ಹಂಚಿಕೊಳ್ಳಿ:

ಬೆಂಗಳೂರು: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಈ ಪ್ರಕರಣದ ತನಿಖೆಯನ್ನು ಕೈಗೊಳ್ಳಲು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ.

ಎಸ್‌ಐಟಿ ಮುಖ್ಯಸ್ಥ ಎನ್.ಶಶಿಕುಮಾರ್ ಅವರು ಲೋಕೇಶ್ ಬಿ ಜಗಲಾಸರ್ ಅವರನ್ನು ಈ ಪ್ರಕರಣದ ತನಿಖಾ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಪ್ರಕರಣದ ತೀವ್ರತೆ ಮತ್ತು ಗಂಭೀರತೆಯನ್ನು ಪರಿಗಣಿಸಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈ ತನಿಖಾ ಅಧಿಕಾರಿಗೆ ಸಹಕಾರ ನೀಡುವ ಸಲುವಾಗಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರನ್ನು ಸಹಾಯಕ ತನಿಖಾ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇನ್ನು ಮುಂದೆ ಒಬ್ಬ ಐಪಿಎಸ್ ಮತ್ತು ಒಬ್ಬ ಕೆಎಸ್‌ಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖಾ ಪ್ರಕ್ರಿಯೆ ಮುಂದುವರಿಯಲಿದೆ.

ಲೋಕೇಶ್ ಬಿ ಜಗಲಾಸರ್ ಅವರು ಈ ಹಿಂದೆ ಧಾರವಾಡ ಹಾಗೂ ಬಾಗಲಕೋಟೆಯಲ್ಲಿ ಎಸ್‌ಪಿಯಾಗಿ, ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸದ್ಯ ಅವರು ಸಿಐಡಿಯಲ್ಲಿ ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಪ್ರಕರಣದ ತನಿಖೆಗಾಗಿ ತಾಂತ್ರಿಕ ಕೌಶಲ್ಯ ಹೊಂದಿರುವ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚನೆಗೆ ಸುಪ್ರೀಂ ಕೋರ್ಟ್ ಕೂಡ ನಿರ್ದೇಶನ ನೀಡಿತ್ತು. ಲೋಕೇಶ್ ಅವರು ಇಂಜಿನಿಯರ್ ಪದವೀಧರರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದಿದ್ದ ಏಳು ಕೋಟಿ ದರೋಡೆ ಪ್ರಕರಣಗಳ ತನಿಖೆಯ ನೇತೃತ್ವವನ್ನು ಅವರು ಹಿಂದೆ ವಹಿಸಿದ್ದರು. ದರೋಡೆಯಾಗಿದ್ದ ಸಂಪೂರ್ಣ ಹಣವನ್ನು ಅವರ ತಂಡವು ಕೇವಲ ಎರಡೇ ದಿನದಲ್ಲಿ ರಿಕವರಿ ಮಾಡಿತ್ತು.

ಹಂಚಿಕೊಳ್ಳಿ: