ಶಾಸಕ ಸುನೀಲ್ ಕುಮಾರ್ ಸುಳ್ಳಿನ ಆರೋಪಕ್ಕೆ ಕಾಂಗ್ರೆಸ್ ನೀಡಿತು ಸತ್ಯದ ಉತ್ತರ!
ರಾಜ್ಯ ಸರಕಾರದ ಮೇಲೆ ಝೀರೋ ಬ್ಯಾಲೆನ್ಸ್ ಆರೋಪ ಮಾಡಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವ ಕಾರ್ಕಳ ಶಾಸಕರ ಝೀರೋ ನಾಲೇಜ್ ವಿರುದ್ದ ದಾಖಲೆಯೊಂದಿಗೆ ಸಮರ್ಪಕ ಉತ್ತರವನ್ನು ಕೊಡುವ ನಿಟ್ಟಿನಲ್ಲಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್...

ರಾಜ್ಯ ಸರಕಾರದ ವಿರುದ್ಧ ಝೀರೋ ಬ್ಯಾಲೆನ್ಸ್ ಆರೋಪ ಹೊರಿಸಿ ಪ್ರತಿಭಟನೆ ನಡೆಸುತ್ತಿರುವ ಕಾರ್ಕಳ ಶಾಸಕರ ಝೀರೋ ನಾಲೇಜ್ ವಿರುದ್ಧ ದಾಖಲೆ ಸಹಿತ ಸೂಕ್ತ ಉತ್ತರ ನೀಡುವ ಉದ್ದೇಶದಿಂದ, ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಕ್ಟೋಬರ್ 8 ಗುರುವಾರ ಬೆಳಿಗ್ಗೆ 10:30ಕ್ಕೆ ತಾಲೂಕು ಕಚೇರಿ ಎದುರು “ಸತ್ಯ ಮೇವ ಜಯತೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ರಾಜ್ಯ ಸರಕಾರವು ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಾ ಜನಪರ ಆಡಳಿತದ ಮೂಲಕ ಯಶಸ್ಸು ಕಾಣುತ್ತಿರುವುದನ್ನು ಸಹಿಸದ ಶಾಸಕರು, ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರತಿಭಟನೆಯ ನೆಪದಲ್ಲಿ ಸುಳ್ಳಿನ ಸಾಮ್ರಾಜ್ಯ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವ ಶಾಸಕರ ಅಸಲಿ ಮುಖವಾಡವನ್ನು ಕಳಚಲು ಮತ್ತು ಅವರ ಸುಳ್ಳು ಆರೋಪಗಳಿಗೆ ಸತ್ಯದ ಮೂಲಕ ಉತ್ತರ ನೀಡಲು ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




