ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಶಾಸಕ ವಿನಯ್ ಕುಲಕರ್ಣಿಗೆ ಇಂದು ಬಿಗ್ ಡೇ; ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ

– ಸುಪ್ರೀಂನಲ್ಲಿ ಇಂದೇ ಆದೇಶ ಸಾಧ್ಯತೆ ನವದೆಹಲಿ: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ (Yogesh Gowda) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಶಾಸಕ ವಿನಯ್...

· ಧಾರವಾಡ
ಶಾಸಕ ವಿನಯ್ ಕುಲಕರ್ಣಿಗೆ ಇಂದು ಬಿಗ್ ಡೇ; ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ
ಹಂಚಿಕೊಳ್ಳಿ:

– ಸುಪ್ರೀಂನಲ್ಲಿ ಇಂದೇ ಆದೇಶ ಸಾಧ್ಯತೆ

ನವದೆಹಲಿ: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ (Yogesh Gowda) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ.

ಶಾಸಕ ವಿನಯ್ ಕುಲಕರ್ಣಿ (Vinay Kulkarni) ವಿರುದ್ಧ ಸಿಬಿಐ ಮತ್ತು ಯೋಗೇಶ್ ಗೌಡ ಸಹೋದರ ಗುರುನಾಥ್ ಗೌಡ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಯಲಿದೆ. ಕೆಳ ಹಂತದ ನ್ಯಾಯಲಯದ ಆದೇಶಕ್ಕೆ ತಡೆ ನೀಡಿ, ಜಾಮೀನು ನೀಡಿದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಲಾಗಿತ್ತು.

ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಕಳೆದ ವಿಚಾರಣೆಯಲ್ಲಿ ಕೊಲೆ ಪ್ರಕರಣ ಆರೋಪಿಗಳು ವಿಧಾನಸಭೆಯಲ್ಲಿ ಇರಬೇಕೇ ಎಂದು ನ್ಯಾಯಪೀಠ ಪ್ರಶ್ನಿಸಿತ್ತು.

ಇಂದು ಕೊಲೆ, ನಾಳೆ ದರೋಡೆ ಮಾಡಿದವರು ವಿಧಾನಸಭೆ ಪ್ರವೇಶಿಸಬೇಕೆ ಎಂದು ಕಟುವಾಗಿ ಮೌಕಿಕವಾಗಿ ಕೋರ್ಟ್ ಪ್ರಶ್ನಿಸಿತ್ತು. ವಿಚಾರಣೆ ವೇಳೆ ವಿನಯ್ ಕುಲಕರ್ಣಿಗೆ ನ್ಯಾಯಾಲಯ ನೋಟಿಸ್ ನೀಡಿತ್ತು.

ಇಂದು ಕೋರ್ಟ್ ವಿಚಾರಣೆ ಮುಂದುವರಿಸಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿನಯ್ ಕುಲಕರ್ಣಿಗೆ ಬಿಗ್ ಡೇ ಆಗಿದ್ದು, ಜಾಮೀನು ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

ಹಂಚಿಕೊಳ್ಳಿ: