ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

KEA PGCET: ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೆಇಎ, ಚಾಯ್ಸ್ ಎಂಟ್ರಿಗೆ ಅವಕಾಶ!

ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂ.ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಎಲ್ಲ ನಾಲ್ಕು ಚಾಯ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷ...

· ಬೆಂಗಳೂರು ನಗರ
ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಕೆಇಎ – PGCET ಚಾಯ್ಸ್ ದಾಖಲಿಸಲು ಅವಕಾಶ
ಹಂಚಿಕೊಳ್ಳಿ:

ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂ.ಆರ್ಕ್ ಕೋರ್ಸ್‌ಗಳ ಪ್ರವೇಶಾತಿಗಾಗಿ ಮೊದಲ ಹಂತದಲ್ಲಿ ಸೀಟು ಹಂಚಿಕೆಯಾಗಿರುವ ವಿದ್ಯಾರ್ಥಿಗಳು ನಾಲ್ಕು ಚಾಯ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karmataka Examination Authority) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಕೆಇಎ (KEA) ಪ್ರಕಟಣೆಯನ್ನು ಹೊರಡಿಸಿದೆ. ಅ.13ರ ಬೆಳಿಗ್ಗೆ 10 ಗಂಟೆಯವರೆಗೆ ಚಾಯ್ಸ್ ಆಯ್ಕೆ ಮಾಡಲು ಸಮಯ ನೀಡಲಾಗಿದೆ. ಈಗಾಗಲೇ ಕಾಲೇಜಿಗೆ ಸೇರ್ಪಡೆಯಾಗಿರುವವರು ಮತ್ತು ಸೀಟು ಹಂಚಿಕೆ ಪತ್ರ ಪಡೆದಿರುವವರು ಚಾಯ್ಸ್-2 ಅನ್ನು ಆಯ್ಕೆ ಮಾಡಿ ಉತ್ತಮ ಸೀಟಿಗೆ ಅಪ್ ಗ್ರೇಡ್ ಆಗಲು ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಅ.13ರ ಮಧ್ಯಾಹ್ನ 2ರಿಂದ ಅ.15ರ ಬೆಳಿಗ್ಗೆ 10ಗಂಟೆಯವರೆಗೆ ಆಪ್ಷನ್ಸ್ ಅನ್ನು ಬದಲಾಯಿಸಿಕೊಳ್ಳಲು (Re-Arrange) ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪಿಜಿಸಿಇಟಿಗೆ ಹೆಚ್ಚುವರಿಯಾಗಿ ಎರಡು ಸುತ್ತಿನ ಕೌನ್ಸೆಲಿಂಗ್ ನಡೆಸಲು ಅನುಮತಿ ನೀಡಬೇಕು ಹಾಗೂ ಯುಜಿ ಮತ್ತು ಪಿಜಿ ಕೋರ್ಸ್‌ಗಳ ಪ್ರವೇಶಕ್ಕೆ ಪ್ರತ್ಯೇಕ ವೇಳಾಪಟ್ಟಿ ನಿಗದಿಪಡಿಸಲು ಎಐಸಿಟಿಎಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿದೆ. ಮುಂದಿನ ಆದೇಶದವರೆಗೆ ನಾಲ್ಕು ಚಾಯ್ಸ್ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಚಾಯ್ಸ್-1 ಆಯ್ಕೆ ಮಾಡಿದಲ್ಲಿ ಕಾಲೇಜಿಗೆ ಪ್ರವೇಶ ಪಡೆಯುವುದು ಕಡ್ಡಾಯ. ಚಾಯ್ಸ್-2 ಆಯ್ಕೆ ಮಾಡಿದರೆ ಉತ್ತಮ ಸೀಟಿಗೆ ಅಪ್ ಗ್ರೇಡ್ ಆಗಲು ಅವಕಾಶ ಸಿಗುತ್ತದೆ. ಚಾಯ್ಸ್-3 ಆಯ್ಕೆ ಮಾಡಿದರೆ ಹಂಚಿಕೆಯಾದ ಸೀಟು ಬೇಡ ಎಂದರ್ಥ ಮತ್ತು ಚಾಯ್ಸ್-4 ಆಯ್ಕೆ ಮಾಡಿದರೆ ಯಾವುದೇ ಸೀಟು ಬೇಡ ಎಂದು ಕೌನ್ಸೆಲಿಂಗ್ ಪ್ರಕ್ರಿಯೆಯಿಂದಲೇ ಹೊರಬರಲು ಅವಕಾಶವಿರುತ್ತದೆ. ಎರಡನೇ ಸುತ್ತಿನ ಸೀಟು ಹಂಚಿಕೆ ನಡೆಸುವಂತೆ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿದ್ದವು. ಇದೀಗ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಕೆಇಎ ಚಾಯ್ಸ್ ಆಯ್ಕೆಗೆ ಅವಕಾಶ ನೀಡಿದೆ.ಇದನ್ನೂ ಓದಿ: ಹಿರಿಯ ನಟ ನಾನಾ ಪಾಟೇಕರ್ ನಿಧನ – ಗೋವಾ ಪೊಲೀಸರಿಂದ ಅಸ್ವಾಭಾವಿಕ ಸಾವು ಕೇಸ್‌ ದಾಖಲು

ಹಂಚಿಕೊಳ್ಳಿ: