ಪಿತೃಪಕ್ಷ ಮುಗಿಯುತ್ತಿದ್ದಂತೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ: ಜೆಡಿಎಸ್ ವರಿಷ್ಟ ಚ್.ಡಿ. ದೇವೇಗೌಡ!
ಹಾಸನ: ಪಿತೃಪಕ್ಷದ ಬಳಿಕ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕಿಡ್ನಿ ವೈಫ...

ಹಾಸನ: ಪಿತೃಪಕ್ಷ ಮುಗಿದ ನಂತರ ರಾಜ್ಯದ ರಾಜಕೀಯ ಚಟುವಟಿಕೆಗಳಲ್ಲಿ ಪುನಃ ಸಕ್ರಿಯವಾಗಿ ಭಾಗವಹಿಸುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಗೆ ಕಿಡ್ನಿ ವೈಫಲ್ಯದ ಸಮಸ್ಯೆಯಿದ್ದು, ನಿರಂತರವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಕಿಡ್ನಿ ಸಂಬಂಧಿತ ತೊಂದರೆ ಇರಬಹುದು, ಆದರೆ ನನ್ನ ಜ್ಞಾಪಕ ಶಕ್ತಿ ಚುರುಕಾಗಿದೆ. ಯಾವುದೇ ಕಾಲಘಟ್ಟದ ರಾಜಕೀಯ ಇತಿಹಾಸವನ್ನು ವಿವರಿಸುವ ಶಕ್ತಿ ನನಗಿದೆ ಎಂದು ನುಡಿದರು.
ಈ ವೇಳೆ ಮಾತನಾಡುತ್ತಾ, ತಾವು ಕೇವಲ ತಮ್ಮ ಸ್ವಂತ ಜಿಲ್ಲೆಗೆ ಮಾತ್ರ ಸೀಮಿತವಾಗದೆ, ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುವುದಾಗಿ ತಿಳಿಸಿದರು.
ನೈಸ್ ಯೋಜನೆ ಕುರಿತಂತೆ ಕಾಂಗ್ರೆಸ್ ಸೇರಿದಂತೆ ವಿವಿಧ ನಾಯಕರು ಮಾಡುತ್ತಿರುವ ಟೀಕೆಗಳ ಬಗ್ಗೆ ತಮಗೆ ಪೂರ್ಣ ಅರಿವಿದೆ. ನೈಸ್ ಯೋಜನೆ ತಮ್ಮ ಕೊಡುಗೆ ಎಂದು ಕೆಲವು ನಾಯಕರು ಆರೋಪಿಸುತ್ತಿರುವುದು ವಿಷಾದನೀಯ. ಆದರೆ, ವಾಸ್ತವ ಸಂಗತಿಗಳು ಬೇರೆಯೇ ಇವೆ ಎಂದು ಅವರು ನುಡಿದರು.
ದೆಹಲಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ಹಾಗೂ ಎಸ್ಐಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಅವರು ಭಾರತದ ಚುನಾವಣಾ ಆಯೋಗವನ್ನು ಟೀಕಿಸುವ ಬದಲಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿದ್ದಾರೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗಾಗಿ ಕಾಯೋಣ ಎಂದು ಹೇಳಿದರು.




