ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕ್ರೀಡೆ

ಜೀತ್ ರಾವಲ್: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಚಾರ್ಟರ್ಡ್ ಅಕೌಂಟೆಂಟ್

ಗುಜರಾತ್‌ನಲ್ಲಿ ಜನಿಸಿ ನ್ಯೂಜಿಲೆಂಡ್ ತಂಡದ ಸ್ಟಾರ್ ಆರಂಭಿಕ ಬ್ಯಾಟರ್ ಆಗಿ ಮಿಂಚಿದ ಜೀತ್ ರಾವಲ್ ತಮ್ಮ 38ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 24 ಟೆಸ್ಟ್ ಪಂದ್ಯಗಳನ್ನು ಆಡಿರುವ ಇವರು...

ಭಾರತದಲ್ಲಿ ಹುಟ್ಟಿ ನ್ಯೂಜಿಲೆಂಡ್‌ ಪರ ಕ್ರಿಕೆಟ್‌ ಆಡಿದ ಚಾರ್ಟರ್ಡ್‌ ಅಕೌಂಟೆಂಟ್‌, ಇವರಿಗೂ ಪಾರ್ಥಿವ್‌ ಪಟೇಲ್‌ಗೂ ಇದೆ ಲಿಂಕ್‌
ಹಂಚಿಕೊಳ್ಳಿ:

ಗುಜರಾತ್‌ನಲ್ಲಿ ಹುಟ್ಟಿ ನ್ಯೂಜಿಲೆಂಡ್ ತಂಡದ ಪ್ರಮುಖ ಆರಂಭಿಕ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಜೀತ್ ರಾವಲ್, ತಮ್ಮ 38ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಒಟ್ಟು 24 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಇವರು, ಸದ್ಯ ಚಾರ್ಟರ್ಡ್ ಅಕೌಂಟೆಂಟ್ ಆಗಿ ತಮ್ಮ ವೃತ್ತಿಜೀವನವನ್ನು ಮುಂದುವರಿಸುತ್ತಿದ್ದಾರೆ. ಈ ಲೇಖನವು ನ್ಯೂಜಿಲೆಂಡ್‌ನ ಸ್ಟಾರ್ ಕ್ರಿಕೆಟಿಗನ ಕುರಿತಾಗಿದೆ. ಗುಜರಾತ್‌ನಲ್ಲಿ ಜನಿಸಿದ್ದ ಇವರು ನಂತರದ ದಿನಗಳಲ್ಲಿ ನ್ಯೂಜಿಲೆಂಡ್‌ನ ಸ್ಟಾರ್ ಕ್ರಿಕೆಟರ್ ಆಗಿ ಆಡಿದರು. ಪ್ರಸ್ತುತ ತಮ್ಮ 38ನೇ ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮತ್ತೊಂದು ಗಮನಾರ್ಹ ವಿಷಯವೆಂದರೆ ಇವರು ಪಾರ್ಥಿವ್‌ ಪಟೇಲ್‌ ಅವರೊಂದಿಗೆ ನಂಟನ್ನು ಹೊಂದಿದ್ದಾರೆ.

ಇವರ ಹೆಸರು ಜೀತ್‌ ರಾವಲ್.‌ ಇವರು ನ್ಯೂಜಿಲೆಂಡ್‌ನ ಟೆಸ್ಟ್‌ ಪಂದ್ಯಗಳ ಆರಂಭಿಕ ಬ್ಯಾಟರ್ ಆಗಿದ್ದರು. 2016 ಮತ್ತು 2020ರ ಅವಧಿಯಲ್ಲಿ ನ್ಯೂಜಿಲೆಂಡ್‌ ತಂಡದ ಪರ 24 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದಾರೆ. ವಿಶೇಷವೆಂದರೆ ಇವರು 10 ಸಾವಿರಕ್ಕೂ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ನಿವೃತ್ತಿ ಹೊಂದಿದ ನಂತರ ಚಾರ್ಟರ್ಡ್‌ ಅಕೌಂಟ್‌ನಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿದ್ದಾರೆ.

ರಾವಲ್‌ ಸೆಪ್ಟೆಂಬರ್‌ 22, 1988ರಂದು ಗುಜರಾತ್‌ನಲ್ಲಿ ಜನಿಸಿದರು. ಇವರು ಬಾಲ್ಯದಲ್ಲಿದ್ದಾಗ ಇವರ ಕುಟುಂಬ ನ್ಯೂಜಿಲೆಂಡ್‌ಗೆ ಸ್ಥಳಾಂತರಗೊಂಡಿತ್ತು. 2008ರಿಂದ ನ್ಯೂಜಿಲೆಂಡ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇವರ ಆಟ ಗಮನಾರ್ಹವಾಗಿತ್ತು. ಒಟ್ಟು 18 ವರ್ಷಗಳ ಕಾಲ ಇವರು ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡರು. ಇನ್ನೊಂದು ವಿಶೇಷ ಸಂಗತಿಯೆಂದರೆ ಇವರು ಟೀಂ ಇಂಡಿಯಾದ ಮಾಜಿ ಸ್ಟಾರ್‌ ಪಾರ್ಥಿವ್‌ ಪಟೇಲ್‌ ಅವರ ಕ್ಲಾಸ್‌ ಮೇಟ್‌ ಆಗಿದ್ದರು.

ಆರಂಭದ ದಿನಗಳಲ್ಲಿ ನ್ಯೂಜಿಲೆಂಡ್‌ ದೇಶಿಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆಕ್ಲೆಂಡ್‌ ತಂಡದ ಪರ ಆಡುತ್ತಿದ್ದ ಇವರು, 292 ಪ್ರಥಮ ದರ್ಜೆ ಪಂದ್ಯಗಳನ್ನ ಆಡಿದ್ದಾರೆ. 285 ಇನ್ನಿಂಗ್ಸ್‌ಗಳಲ್ಲಿ 10127 ರನ್‌ಗಳನ್ನ ಗಳಿಸಿದ್ದಾರೆ. ಇದರಲ್ಲಿ 23 ಶತಕಗಳೂ ಕೂಡ ಒಳಗೊಂಡಿವೆ. 2016ರಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 24 ಟೆಸ್ಟ್‌ ಪಂದ್ಯಗಳಲ್ಲಿ ಒಂದು ಶತಕ ಮತ್ತು 7 ಅರ್ಧ ಶತಕಗಳ ಸಹಿತ ಒಟ್ಟು 1143 ರನ್‌ಗಳನ್ನ ದಾಖಲಿಸಿದ್ದಾರೆ. ಇವರು ತಮ್ಮ ಮೊದಲ ಟೆಸ್ಟ್‌ ಶತಕಕ್ಕಾಗಿ 28 ಇನ್ನಿಂಗ್ಸ್‌ಗಳ ಕಾಲ ಕಾಯಬೇಕಾಯಿತು.

ಇನ್ನೊಂದು ವಿಶೇಷವೆಂದರೆ 2021ರಲ್ಲಿ ನ್ಯೂಜಿಲೆಂಡ್‌ ತಂಡವು ಚೊಚ್ಚಲ ವಿಶ್ವ ಟೆಸ್ಟ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ತಂಡದಲ್ಲಿ ಇವರೂ ಸಹ ಸದಸ್ಯರಾಗಿದ್ದರು. ಟೆಸ್ಟ್‌ ಪಂದ್ಯಗಳಲ್ಲಿ ತಮ್ಮಿಂದ ಹೆಚ್ಚಿನ ಶತಕಗಳು ದಾಖಲಾಗದಿದ್ದರೂ, ಕೇನ್‌ ವಿಲಿಯಮ್ಸನ್‌ ಮತ್ತು ರಾಸ್‌ ಟೇಲರ್‌ನಂತಹ ಅನುಭವಿ ಆಟಗಾರರು ತಮ್ಮನ್ನು ಬೆಂಬಲಿಸಿದ್ದರು ಎಂದು ರಾವಲ್‌ ಹೇಳಿಕೊಂಡಿದ್ದಾರೆ.

ಇನ್ನು ಮೈದಾನದ ಹೊರಗೆ ರಾವಲ್‌ ಆಡಿಟಿಂಗ್‌ ಕಂಪನಿ ಒಂದರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಕ್ರಿಕೆಟ್‌ ಕೋಚ್‌ ಆಗಿಯೂ ಕೆಲಸ ಮಾಡಿದ ಅನುಭವವನ್ನು ಇವರು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಅಲ್ಲಿನ ಮಾಯಾ ಮತ್ತು ಸಮೋವಾ ತಂಡಗಳಿಗೆ ಕೋಚ್‌ ಆಗಿ ಸೇವೆ ಸಲ್ಲಿಸಿದ್ದರು.

ಹಂಚಿಕೊಳ್ಳಿ: