ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಇತರೆ

ಹಿಂದೂ ಜನ ಸೇವಾ ಟ್ರಸ್ಟ್ ವತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಮಾಹಿತಿ ವಾಟ್ಸಪ್ ಗ್ರೂಪ್ ಪ್ರಾರಂಭ

ಹಿಂದೂ ಜನ ಸೇವಾ ಟ್ರಸ್ಟ್ ವತಿಯಿಂದ ಉದ್ಯೋಗ ಆಕಾಂಕ್ಷಿ ಯುವಕ ಯುವತಿಯರಿಗೆ ಉದ್ಯೋಗ ಮಾಹಿತಿ ಸಂಪರ್ಕ ವಾಟ್ಸಾಪ್ ಗೆ ಚಾಲನೆ

ಸಂಪಾದಕೀಯ ಡೆಸ್ಕ್· 1 ನಿಮಿಷ ಓದು· ಉಡುಪಿ
ಉದ್ಯೋಗಗಳು
ಹಂಚಿಕೊಳ್ಳಿ:

🚩 ಹಿಂದೂ ಜನಸೇವಾ ಟ್ರಸ್ಟ್ – ಉದ್ಯೋಗ ಮಾಹಿತಿ ಮತ್ತು ಸಂಪರ್ಕ ಸೇತುವೆ

ಇಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅನೇಕ ಯುವಕ–ಯುವತಿಯರು ಸೂಕ್ತ ಉದ್ಯೋಗಾವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ, ವಿವಿಧ ಸಂಸ್ಥೆಗಳು ಹಾಗೂ ಉದ್ಯಮಗಳಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿದ್ದರೂ, ಅದರ ಸಮರ್ಪಕ ಮಾಹಿತಿ ಉದ್ಯೋಗಾಕಾಂಕ್ಷಿಗಳಿಗೆ ತಲುಪದೇ ಇರುವ ಪರಿಸ್ಥಿತಿ ಇದೆ.

Follow this link to join my WhatsApp group: https://chat.whatsapp.com/LDs3v7TAystI0jfp6OwzHp

ಈ ಹಿನ್ನೆಲೆಯಲ್ಲಿ ಹಿಂದೂ ಜನಸೇವಾ ಟ್ರಸ್ಟ್ (ರಿ.) ವತಿಯಿಂದ ನಿರುದ್ಯೋಗಿ ಹಾಗೂ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ–ಯುವತಿಯರಿಗೆ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶಗಳು, ಖಾಲಿ ಹುದ್ದೆಗಳು, ನೇಮಕಾತಿ ಮಾಹಿತಿ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಕ್ಕೆ ಅಗತ್ಯವಿರುವ ಮಾರ್ಗದರ್ಶನವನ್ನು ತಲುಪಿಸುವ ಪ್ರಯತ್ನವನ್ನು ಕೈಗೊಳ್ಳಲಾಗುವುದು.

ಉದ್ಯೋಗ ನೀಡುವ ಸಂಸ್ಥೆಗಳು ಹಾಗೂ ಉದ್ಯೋಗಕ್ಕಾಗಿ ಹುಡುಕುತ್ತಿರುವ ಯುವಕ–ಯುವತಿಯರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವುದು ಈ ಪ್ರಯತ್ನದ ಪ್ರಮುಖ ಉದ್ದೇಶವಾಗಿದೆ.

ಯಾವುದೇ ಉದ್ಯೋಗದ ಭರವಸೆ ನೀಡದೆ, ಲಭ್ಯವಿರುವ ಉದ್ಯೋಗಾವಕಾಶಗಳ ಮಾಹಿತಿಯನ್ನು ಸರಿಯಾದ ವ್ಯಕ್ತಿಗಳಿಗೆ ತಲುಪಿಸುವುದು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಯ ಬಗ್ಗೆ ಮಾರ್ಗದರ್ಶನ ನೀಡುವುದು ಮತ್ತು ಉದ್ಯೋಗದಾತರು–ಉದ್ಯೋಗಾಕಾಂಕ್ಷಿಗಳ ನಡುವೆ ಸಂಪರ್ಕ ಕಲ್ಪಿಸುವ ಮೂಲಕ ಯುವಜನರಿಗೆ ಸ್ವಾವಲಂಬನೆಯ ದಾರಿ ತೋರಿಸುವುದು ನಮ್ಮ ಆಶಯ.

“ಮಾಹಿತಿ ತಲುಪಿದರೆ ಅವಕಾಶ ಸಿಗುತ್ತದೆ – ಅವಕಾಶ ಸಿಕ್ಕರೆ ಬದುಕು ಬದಲಾಗುತ್ತದೆ.”

ಯುವಜನರ ಭವಿಷ್ಯಕ್ಕೆ ಕೈಜೋಡಿಸುವ ಈ ಸಾಮಾಜಿಕ ಕಾರ್ಯದಲ್ಲಿ ಉದ್ಯೋಗ ನೀಡುವ ಸಂಸ್ಥೆಗಳು, ಉದ್ಯಮಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಸಹಕರಿಸಬೇಕಾಗಿ ವಿನಂತಿ

ಇಲ್ಲಿ ನೀಡುವಂತಹ ಉದ್ಯೋಗ ಜಾಹೀರಾತಿಗೆ ಹಾಗೂ ಹಿಂದೂ ಜನಸೇವಾ ಟ್ರಸ್ಟ್ ಗೆ ಯಾವುದೇ ನೇರ ಸಂಪರ್ಕವಿರುವುದಿಲ್ಲ, ಗುಂಪಿನ ಸದಸ್ಯರು ಜಾಹೀರಾತಿನ ಸಂಪೂರ್ಣ ಹಿನ್ನಲೆ ಹಾಗೂ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಜಾಹೀರಾತಿನ ಉಪಯೋಗ ಪಡೆದುಕೊಳುವಂತೆ ವಿನಂತಿಸಲಾಗಿದೆ

ಹಂಚಿಕೊಳ್ಳಿ: