ಮುಖ್ಯ ವಿಷಯಕ್ಕೆ ಹೋಗಿ
The Karnataka Today
10 Oct
ಸುದ್ದಿ
ಸಿನಿಮಾ

ಯಾರ ಪಾಪದ ಕೊಡ ತುಂಬಿದೆ? ಬಿಗ್‌ಬಾಸ್ ಮನೆಯಿಂದ ಹೋಗುವ ಸ್ಪರ್ಧಿ ಯಾರು? Bigg Boss Kannada

ಬಿಗ್‌ಬಾಸ್ ಮನೆಯಲ್ಲಿ ನಡೆದ ಗಂಧರ್ವರು ಮತ್ತು ರಾಕ್ಷಸರು ಟಾಸ್ಕ್ ವೇಳೆ ಮಂಜುನಾಥ್ ಮತ್ತು ಗಾನವಿ ಬಳಸಿದ ಅವಾಚ್ಯ ಪದಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಈ ವಾರದ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ಎಲ್ಲಾ...

ಯಾರ ಪಾಪದ ಕೊಡ ತುಂಬಿದೆ? ಬಿಗ್‌ಬಾಸ್ ಮನೆಯಿಂದ ಹೋಗುವ ಸ್ಪರ್ಧಿ ಯಾರು? Bigg Boss Kannada
ಹಂಚಿಕೊಳ್ಳಿ:

ಬಿಗ್‌ಬಾಸ್ ಮನೆಯಲ್ಲಿ ನಡೆದ ಗಂಧರ್ವರು ಮತ್ತು ರಾಕ್ಷಸರು ಟಾಸ್ಕ್ ವೇಳೆ ಮಂಜುನಾಥ್ ಮತ್ತು ಗಾನವಿ ಬಳಸಿದ ಅವಾಚ್ಯ ಪದಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಈ ವಾರದ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ಎಲ್ಲಾ ವಿವಾದಗಳ ಬಗ್ಗೆ ಚರ್ಚಿಸಿ ತೀರ್ಪು ನೀಡಲಿದ್ದಾರೆ.

ಇಂದು ಕುತೂಹಲಕಾರಿ ವೀಕೆಂಡ್ ಸಂಚಿಕೆಗಾಗಿ ಬಿಗ್‌ಬಾಸ್ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಬಾರಿ ಕಿಚ್ಚ ಸುದೀಪ್ ಯಾವ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ? ವೀಕ್ಷಕರು ನೋಡಿದರಲ್ಲಿ ಎಷ್ಟು ಸತ್ಯ ಅನ್ನೋದು ಇಂದಿನ ಸಂಚಿಕೆಯಲ್ಲಿ ಸ್ಪಷ್ಟವಾಗಲಿದೆ.

ಹೌದು, ಈ ವಾರದ ಗಂಧರ್ವರು ಮತ್ತು ರಾಕ್ಷಸರು ಟಾಸ್ಕ್ ದೊಡ್ಮನೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಸಂಗೀತಾ ಭಟ್ ಅನಾರೋಗ್ಯ, ಮಂಜುನಾಥ್ ಮತ್ತು ಗಾನವಿ ಬಳಕೆ ಮಾಡಿದ ಅವಾಚ್ಯ ಪದಗಳು, ಹೊಡೆದಾಟ, ಎಳೆದಾಟ ಎಲ್ಲವೂ ಇಂದಿನ ಚರ್ಚೆಯ ಪ್ರಮುಖ ವಿಷಯಗಳಾಗಿರಲಿವೆ. ಮತ್ತೊಂದೆಡೆ ಸೌಂದರ್ಯಾ ಶೆಟ್ಟಿ ಮತ್ತು ಮಂಜುನಾಥ್ ನಡುವಿನ ಕಲಹವೂ ಮನೆಯಲ್ಲಿ ಸದ್ದು ಮಾಡಿತ್ತು.

ಮೊದಲು ರಾಕ್ಷಸರಾದವರು ಗಂಧರ್ವರಿಗೆ ತಮ್ಮಿಂದ ಸಾಧ್ಯವಾಗುವಷ್ಟು ಕಿರುಕುಳ ನೀಡಿದ್ದರು. ಆದ್ರೆ ಸ್ಥಾನಗಳು ಬದಲಾಗುತ್ತಿದ್ದಂತೆ ತಮ್ಮ ಸ್ಥಿಮಿತ ಕಳೆದುಕೊಂಡ ಮಂಜುನಾಥ್, ಯಶಸ್ ವಿರುದ್ಧ ಆಕ್ರೋಶದಿಂದ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದರು. ಇದರಿಂದ ಇಡೀ ಮನೆಯೇ ಒಂದು ಕ್ಷಣ ಶಾಕ್ ಆಗಿತ್ತು. ಯಾರು ಎಷ್ಟೇ ಹೇಳಿದ್ರೂ ಮಂಜುನಾಥ್ ತಮ್ಮ ಮಾತುಗಳನ್ನು ಮುಂದುವರಿಸಿದ್ದರು.

ಇತ್ತ ಯಶಸ್ ಬೆಂಬಲಕ್ಕೆ ನಿಂತವರ ವಿರುದ್ಧವೂ ಮಂಜುನಾಥ್ ತಮ್ಮ ಬಿರುಸು ಮತ್ತು ಅಸಹ್ಯ ಪದಗಳ ಬಾಣವನ್ನು ಪ್ರಯೋಗಿಸಿದರು. ಹಾಗಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾದ ಮಹಾಕವಿ ಮಂಜ, ಕಳಪೆಯಾಗಿ ಜೈಲು ಸೇರುವಂತಾಗಿದೆ. ಮತ್ತೊಂದೆಡೆ ಮಂಜು ಅವರ ಈ ಆಕ್ರೋಶಕ್ಕೆ ಕಾರಣವೇನು? ಯಶಸ್ ಹೇಳಿದ ಮಾತುಗಳೇನು ಎಂಬುವುದು ಇಲ್ಲಿವರೆಗೆ ಸ್ಪಷ್ಟವಾಗಿಲ್ಲ.

ಮತ್ತೊಂದೆಡೆ ಮಂಜು ಹೇಳಿದ ಮಾತಿನಿಂದ ಗಾನವಿ ಮತ್ತು ಗಗನ್ ನಡುವೆ ವಾಕ್ಸಮರವೇ ಏರ್ಪಟ್ಟಿದೆ. ರೇಟ್ ಬಗ್ಗೆ ಮಾತನಾಡಲು ನೀನ್ಯಾರು ಎಂದು ಗಾನವಿ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಮತ್ತೊಂದೆಡೆ ಗಗನ್, ತಮ್ಮ ಇಡೀ ವಾರದ ಒತ್ತಡವನ್ನು ಗಾನವಿ ಮೇಲೆ ಹೊರ ಹಾಕಿದಂತೆ ಕಾಣಿಸಿದೆ. ಈ ವಿಷಯವೂ ಅತ್ಯಂತ ಪ್ರಮುಖವಾಗಿ ಚರ್ಚೆಯಾಗಬೇಕೆಂದು ವೀಕ್ಷಕರು ಒತ್ತಾಯಿಸಿದ್ದಾರೆ.

ಈ ನಡುವೆ ಧನುಷ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ವಾರ ಮನೆಯಿಂದ ಹೊರಗಡೆ ಹೋಗಲು ಮಂಜುನಾಥ್, ಧನುಷ್, ಯಶಸ್ ಕೃಷ್ಣ, ಗಾನವಿ ಗೌಡ, ಕಾವ್ಯಾ, ಸೋನಿಕಾ, ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ನಾಮಿನೇಟ್ ಆಗಿದ್ದಾರೆ. ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತಾ ಭಟ್ ಹಿಂದಿರುಗಿ ಬಂದಿದ್ದು, ಮನೆಯಲ್ಲಿನ ಜಗಳ ನೋಡಿ ಆತಂಕಕ್ಕೊಳಗಾಗುತ್ತಿದ್ದಾರೆ.

ಹಂಚಿಕೊಳ್ಳಿ: