ಮುಖ್ಯ ವಿಷಯಕ್ಕೆ ಹೋಗಿ
The Karnataka Today
10 Oct
ಸುದ್ದಿ
ಸಿನಿಮಾ

ರಜನಿಕಾಂತ್‌ vs ದೇವರಕೊಂಡ: ʼಇದೆಲ್ಲ ಹಣ ಕೊಟ್ಟು ಮಾಡಿಸ್ತಿರೋದುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದೇಕೆ ರಶ್ಮಿಕಾ ಮಂದಣ್ಣ ಪತಿ?

ಅಕ್ಟೋಬರ್‌ನಲ್ಲಿ ರಜನಿಕಾಂತ್ ಅವರ 'ಜೈಲರ್-2' ಮತ್ತು ವಿಜಯ್ ದೇವರಕೊಂಡ ನಟನೆಯ 'ರಣಬಲಿ' ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುತ್ತಿವೆ. ಈ ವೇಳೆ ತಮ್ಮ ಚಿತ್ರದ ವಿರುದ್ಧ ಹಣ ಕೊಟ್ಟು ನೆಗೆಟಿವ್ ಪ್ರಚಾರ ಮಾಡಲಾಗುತ್ತಿದೆ ಎಂ...

ರಜನಿಕಾಂತ್‌ vs ದೇವರಕೊಂಡ: ʼಇದೆಲ್ಲ ಹಣ ಕೊಟ್ಟು ಮಾಡಿಸ್ತಿರೋದುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದೇಕೆ ರಶ್ಮಿಕಾ ಮಂದಣ್ಣ ಪತಿ?
ಹಂಚಿಕೊಳ್ಳಿ:

ಸೂಪರ್‌ ಸ್ಟಾರ್ ರಜನಿಕಾಂತ್‌ vs‌ ವಿಜಯ್‌ ದೇವರಕೊಂಡ (Super star Rajinikanth vs Vijay Devarakonda) ಫೈಟ್‌ ಶುರುವಾಗಿದೆ. ಅದಕ್ಕೆ ಜೈಲರ್‌-2 ಹಾಗೂ ರಣಬಲಿ (Ranabaali and Jailer 2) ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿರೋದು. ರಜನಿಕಾಂತ್‌ ಅಭಿನಯ ಜೈಲರ್‌-2 ಸಿನಿಮಾ ಅಕ್ಟೋಬರ್‌ 15ಕ್ಕೆ ಬಿಡುಗಡೆ ಆಗುತ್ತಿದ್ದರೆ, ವಿಜಯ್‌ ದೇವರಕೊಂಡ ಅಭಿನಯದ ಸಿನಿಮಾ ರಣಬಲಿ ಅಕ್ಟೋಬರ್‌ 16ಕ್ಕೆ ಗ್ರ್ಯಾಂಡ್‌ ಆಗಿ ತೆರೆಗೆ ಅಪ್ಪಳಿಸುತ್ತಿದೆ.

ಈ ಎರಡೂ ಸಿನಿಮಾಗಳು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗುತ್ತಿವೆ. ಜೈಲರ್‌ 2 ಸಿನಿಮಾಕ್ಕೆ ನೆಲ್ಸನ್‌ ದಿಲೀಪ್‌ ಕುಮಾರ್‌ (Nelson Dilipkumar) ಅವರು ಆಕ್ಷನ್‌ ಕಟ್‌ ಹೇಳಿದ್ದಾರೆ. ಇದು 2023ರಲ್ಲಿ ತೆರೆಕಂಡು ಸೂಪರ್‌ ಹಿಟ್‌ ಕೊಟ್ಟಿದ್ದ ಜೈಲರ್‌ ಚಿತ್ರದ ಮುಂದುವರಿದ ಭಾಗ ಅಷ್ಟೇ. ಇನ್ನು ರಣಬಲಿ ಚಿತ್ರಕ್ಕೆ ರಾಹುಲ್‌ ಸಂಕೃತ್ಯನ್‌ (Rahul Sankrityan) ಡೈರೆಕ್ಷನ್‌ ಆಗಿದೆ. 2018ರಲ್ಲಿ ಟ್ಯಾಕ್ಸಿವಾಲಾ (Taxiwaala movie) ಎಂಬ ಸಿನಿಮಾವನ್ನು ದೇವರಕೊಂಡಗಾಗಿ ಮಾಡಿದ್ದರು. ಆ ಚಿತ್ರದ ಬಳಿಕ ದೇವರಕೊಂಡ ಹಾಗೂ ರಾಹುಲ್‌ ಕಾಂಬಿನೇಷನ್‌ನ ಎರಡನೇ ಚಿತ್ರವೇ ರಣಬಲಿ. ಇನ್ನೊಂದು ವಿಶೇಷ ಅಂದರೆ ಈ ಚಿತ್ರದಲ್ಲಿ ವಿಜಯ್‌ ದೇವರಕೊಂಡ ಪತ್ನಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ನಟಿಸಿದ್ದಾರೆ.

ವಿಜಯ್‌ ದೇವರಕೊಂಡಗೆ ಕೋಪ ಬಂದಿದ್ದೇಕೆ? 

ವಿಜಯ್‌ ದೇವರಕೊಂಡ ಕೋಪ ಮಾಡಿಕೊಂಡಿದ್ದು ರಜನಿಕಾಂತ್‌ ಮೇಲೆ ಅಲ್ಲ. ಅವರ ಫ್ಯಾನ್ಸ್‌ ಮೇಲೂ ಅಲ್ಲ. ಬದಲಾಗಿ ಸುಖಾಸುಮ್ಮನೆ ಟ್ರೋಲ್‌ ಮಾಡ್ತಿರುವ ಕೆಲವು ಟ್ರೋಲಿಗರ ವಿರುದ್ಧ. ದೇವರಕೊಂಡ ಅವರನ್ನು ಹೇಗೆ ಟ್ರೋಲ್‌ ಮಾಡಲಾಗುತ್ತಿದೆ ಅಂತಾ ನೋಡೋದಾದರೆ.. ಇತ್ತೀಚೆಗೆ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ರಣಬಲಿ ಸಿನಿಮಾದ ಟ್ರೈಲರ್‌ ಲಾಂಚ್‌ ಮಾಡಿದರು. ಈ ವೇಳೆ ತಮ್ಮನ್ನು ಟ್ರೋಲ್‌ ಮಾಡುತ್ತಿರುವ ಬಗ್ಗೆ ದೇವರಕೊಂಡ ಆಕ್ರೋಶ ವ್ಯಕ್ತಪಡಿಸಿದರು. ತೆಲುಗು ಚಿತ್ರ, ನನ್ನ ಸಿನಿಮಾ ರಣಬಲಿ ಬದಲು ನಾವು ರಜನಿಕಾಂತ್‌ ಅವರ ತಮಿಳು ಚಿತ್ರ ರಜನಿಕಾಂತ್‌ ಅವರ ಜೈಲರ್-2‌ ಸಿನಿಮಾ ನೋಡುತ್ತೇನೆ ಎಂದು ಟ್ರೋಲ್‌ ಮಾಡ್ತಿದ್ದಾರೆ. ನಮ್ಮ ಚಿತ್ರದ ವಿರುದ್ಧ ನೆಗೆಟಿವ್‌ ಕಾಮೆಂಟ್ಸ್‌ಗಳು ಬರುತ್ತಿದೆ. ಇದು ಹಣ ಕೊಟ್ಟು ಮಾಡಿಸುತ್ತಿರುವ (ಪೇಡ್) ಪ್ರಚಾರ. ಟ್ರೋಲ್‌ ಆಗ್ತಿರುವ ಎಲ್ಲಾ ವಿಚಾರಗಳು ಸೃಷ್ಟಿ ಆಗಿರೋದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಿಗೆ ಕೇಳಿದ ಪ್ರಶ್ನೆಗಳಿ ಉತ್ತರಿಸಿರುವ ಅವರು.. ಯಾರೋ ಅಂದುಕೊಳ್ಳುತ್ತಾರೆ.. ನನ್ನ ಕನಸುಗಳು ಮತ್ತು ಪರಿಶ್ರಮ ವೇಸ್ಟ್‌ ಎಂದು. ಅವರಾರೋ ಅಂದುಕೊಂಡ ಮಾತ್ರಕ್ಕೆ ನಾನು ನನ್ನ ಕೆಲಸವನ್ನು ನಿಲ್ಲಿಸಬೇಕಾ? ನನ್ನ ಪ್ರಾಮಾಣಿಕತೆಯನ್ನ ಕೆಲವರು ದುರಹಂಕಾರ ಅಂದುಕೊಂಡಿದ್ದಾರೆ. ನನ್ನ ಆತ್ಮವಿಶ್ವಾಸವನ್ನು ಅವರು ಗರ್ವ ಅಂದುಕೊಂಡಾಗ.. ನಾನು ನನ್ನ ಕೆಲಸವನ್ನು ಅಲ್ಲಿಗೆ ನಿಲ್ಲಿಸಿಬಿಡಬೇಕಾ? ಅವರಿಗೆ ನನ್ನ ಬೆಳವಣಿಗೆ ಸಹಿಸಲು ಆಗೋದಿಲ್ಲ ಅಂದ್ರೆ.. ಅವರಿಗೋಸ್ಕರ ನಾನು ಮನೆಯಲ್ಲೇ ಕೂರಬೇಕಾ? ಇಲ್ಲ, ಇದಕ್ಕೆಲ್ಲ ನಾನು ಬದಲಾಗಲ್ಲ. ಯಾರು ನನ್ನನ್ನು ದ್ವೇಷ ಮಾಡುತ್ತಾರೋ ಅವರೇ ಬದಲಾಗಬೇಕು. ನನಗೆ ಯಶಸ್ಸಿನ ಕಥೆಗಳು ಅಂದರೆ ತುಂಬಾನೇ ಇಷ್ಟ. ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ದ್ವೇಷ ಕಾಮೆಂಟ್‌ಗಳನ್ನು ನೋಡಿದ್ರೆ ಯಾರೋ ಹಣ ಕೊಟ್ಟು ಕಾಮೆಂಟ್ಸ್‌ ಮಾಡುತ್ತಿದ್ದಂತೆಯೇ ಕಾಣುತ್ತಿದೆ. ಅವರ ಟ್ರೋಲ್‌ ಉದ್ದೇಶಪೂರ್ವಕ ಮತ್ತು ದ್ವೇಷದಿಂದ ಕೂಡಿದೆ ಎಂದು ಕಾರಣ.. ಅದರಲ್ಲಿ ಶೇಕಡಾ 90 ರಷ್ಟು ಕೃತಕವಾಗಿ ಸೃಷ್ಟಿಸಲಾಗಿದೆ. ತೆಲುಗು ಸಿನಿಮಾ ಆಗಿದ್ದರೂ ನಾವು ರಣಬಲಿ ಬದಲು ಜೈಲರ್‌ ನೋಡುತ್ತೇವೆ ಎಂದು ಒಂದೇ ಸಮನೆ ರೀಲ್ಸ್‌ ಹರಿಬಿಡ್ತಿರೋದು ದ್ವೇಷದಿಂದ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಚಿತ್ರದ ಕ್ಲ್ಯಾಶ್‌ ಬಗ್ಗೆಯೂ ಅವರು ಮಾತನ್ನಾಡಿದ್ದಾರೆ.. ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯ ಇರಬಹುದು. ಇರುತ್ತದೆ. ಆದರೆ ಎಲ್ಲಾ ಕಡೆ ಒಂದೇ ರೀತಿಯ ಅಭಿಪ್ರಾಯ ಹರಿದಾಡುತ್ತಿದೆ ಎಂದರೆ ಏನರ್ಥ. ದುಡ್ಡು ಕೊಟ್ಟು ಮಾಡಿದ್ದು ಎಂದರ್ಥ ಅಲ್ಲವೇ? ಹಣಕ್ಕಾಗಿ ಇಂಥ ನೆಗೆಟೀವ್‌ ಪ್ರಚಾರ ಮಾಡೋರು ಒಂದನ್ನ ಅರ್ಥ ಮಾಡಿಕೊಳ್ಳಬೇಕು. ನಾಳೆ ಇದೇ ಕೆಲಸವನ್ನು ಎಐ ಮಾಡುತ್ತದೆ. ದುಡ್ಡು ಕೊಡುವವರೇ ನಿಲ್ಲಿಸುತ್ತಾರೆ. ಸೋಶಿಯಲ್‌ ಮೀಡಿಯಾವನ್ನು ಜನರನ್ನು ತುಳಿಯಲು ಬಳಸಿಕೊಳ್ಳಲಾಗುತ್ತಿದೆ ಎಂದು ವಿಜಯ್‌ ದೇವರಕೊಂಡ ಬೇಸರ ವ್ಯಕ್ತಪಡಿಸಿದ್ದಾರೆ.

ಹಂಚಿಕೊಳ್ಳಿ: