'ಎರಡು ತಲೆಯ ನಾಗರ ಹಾವು ಕಾಣಬೇಕೆ? ನಿಯ್ಯತ್ತಿಲ್ಲದ ನಾಯಿ ಎಂದು ನಿಂದಿಸಿದರೆ, ಅದು ನಾಯಿಗೇ ಮಾಡಿದ ಅವಮಾನ'
ಬೆಂಗಳೂರು: ಎರಡು ತಲೆಯ ನಾಗರ ಹಾವನ್ನು ನೋಡಬೇಕೇ? ತಪ್ಪದೇ ಈ ವಿಡಿಯೋ ನೋಡಿ. ನಿಯ್ಯತ್ತಿಲ್ಲದ ನಾಯಿ ಅಂತ ಬೈದರೆ, ನಾಯಿಗೆ ಅವಮಾನ ಮಾಡಿದಂತೆ. ಹಾಗಾಗಿ ನಾವು ಆ ಭಾಷೆ ಬಳಸೋದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ...

ಬೆಂಗಳೂರು: ಎರಡು ತಲೆಯ ನಾಗರ ಹಾವನ್ನು ನೋಡಬೇಕೆ? ಹಾಗಿದ್ದರೆ ಈ ವಿಡಿಯೋವನ್ನು ಖಂಡಿತ ನೋಡಿ. ನಿಯ್ಯತ್ತಿಲ್ಲದ ನಾಯಿ ಎಂದು ಬೈದರೆ ನಾಯಿಗೆ ಅಪಮಾನ ಮಾಡಿದಂತಾಗುತ್ತದೆ, ಆದ್ದರಿಂದ ನಾವು ಅಂತಹ ಭಾಷೆಯನ್ನು ಬಳಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ ಅವರು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕಿಡಿಕಾರಿದ್ದಾರೆ.
ಮಿ. ಪ್ರದೀಪ್ ಈಶ್ವರ್... ಎಲ್ಲವನ್ನೂ ಮರೆತುಬಿಟ್ಟಿರೇನು? ನಿಮ್ಮ ತಲೆಯಲ್ಲಿ ಕೊಂಬು ಬರುತ್ತಿದೆಯೇ? ಕಾಂಗ್ರೆಸ್ ಪಕ್ಷ ಎಂದರೆ ಏನು ಎಂದು ತಿಳಿದುಕೊಂಡಿದ್ದೀರಿ? ರಕ್ಷಾ ರಾಮಯ್ಯ ಅವರ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಷ್ಟು ಧೈರ್ಯ ಬಂತೇ? ಇದೇ ಎಂಪಿ ಚುನಾವಣೆ ನಡೆಯುತ್ತಿದ್ದಾಗ "ರಕ್ಷಾ ಅಣ್ಣ" ಎಂದು ಕರೆಯುತ್ತಿದ್ದ ನಾಲಿಗೆ ಈಗ ಉದ್ದವಾಗಿದೆಯಲ್ಲ, ಏನು ಸಮಾಚಾರ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ತಳ ಸಮುದಾಯದ ಹುಡುಗನೊಬ್ಬ ಶಾಸಕನಾಗಿ ಬಹಳ ಧೈರ್ಯದಿಂದ ಮಾತನಾಡುತ್ತಿದ್ದಾನೆ, ಇಂತಹ ಯುವಕರು ಮುಂದೆ ಬರಬೇಕು ಮತ್ತು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಬಯಸಿದ್ದೆವು. ಆದರೆ ನೀವು ಮೆಗಾಸ್ಟಾರ್ ತರಹ ಡೈಲಾಗ್ ಹೊಡೆಯುತ್ತಾ ತಿಂದ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿರುವುದನ್ನು ನೋಡಿದರೆ, "ಒಬ್ಬ ಜನ ಪ್ರತಿನಿಧಿ ಹೇಗಿರಬಾರದು?" ಎಂಬುದಕ್ಕೆ ಉತ್ತರವಾಗಿ ನಿಮ್ಮನ್ನೇ ತೋರಿಸಬಹುದು.
ನಿಮಗೆ ತೆಲುಗಿನಲ್ಲಿ ಒಂದು ಮಾತು ಹೇಳುತ್ತೇನೆ ಕೇಳಿ. ಬಹುಶಃ ತೆಲುಗು ಸಿನಿಮಾ ನೋಡಿ ನೋಡಿ ನಿಮ್ಮ ನೆಟ್ಟು ಬೋಲ್ಟು ಲೂಸಾಗಿರಬೇಕು. ನಿಮ್ಮ ಸದ್ದು ವಿರೋಧ ಪಕ್ಷದವರ ಮೇಲೆ ಇರಲಿ, ಸ್ವ ಪಕ್ಷದವರ ಮೇಲೆ ಅಲ್ಲ. ಮತ್ತೊಮ್ಮೆ ರಕ್ಷಾ ರಾಮಯ್ಯ ಅವರ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ. ನೀವು ಮಾತನಾಡಿದರೆ ಮಾತ್ರ ಟ್ರೋಲ್ ಆಗುತ್ತೀರಿ, ನಾವು ಕೆಮ್ಮಿದರೂ ಟ್ರೋಲ್ ಆಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.




