ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ರಾಜಕೀಯ

ಸಿದ್ದಾರ್ಥ ವಿಹಾರ್ ಟ್ರಸ್ಟ್‌ ಬಗ್ಗೆ ಮಾತನಾಡುವ ಬದಲು ಮನೆಯಲ್ಲಿ ಮಕ್ಕಳೇನು ಮಾಡ್ತಿದ್ದಾರೆಂದು HDK ತಿಳಿದುಕೊಳ್ಳಲಿ: ಪ್ರಿಯಾಂಕ್ ತಿರುಗೇಟು

ಬೆಂಗಳೂರು: ಸಿದ್ದಾರ್ಥ ಟ್ರಸ್ಟ್‌ ನಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಬದಲು ಅವರ ಮನೆಯಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರ...

· ಬೆಂಗಳೂರು ನಗರ
ಸಿದ್ದಾರ್ಥ ವಿಹಾರ್ ಟ್ರಸ್ಟ್‌ ಬದಲು ಮನೆಯಲ್ಲಿ ಅವರ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ: HDKಗೆ ಪ್ರಿಯಾಂಕ್ ತಿರುಗೇಟು
ಹಂಚಿಕೊಳ್ಳಿ:

ಬೆಂಗಳೂರು: ಸಿದ್ದಾರ್ಥ ಟ್ರಸ್ಟ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಹುಡುಕುವ ಬದಲು, ತಮ್ಮ ಮನೆಯಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ಮೊದಲು ಅರಿತುಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಸಿದ್ದಾರ್ಥ ಟ್ರಸ್ಟ್‌ನಿಂದ ಫಾರ್ಮ್ 7 ಪ್ರಿಂಟ್ ಆಗುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದಾರ್ಥ ವಿಹಾರ್ ಟ್ರಸ್ಟ್‌ನಲ್ಲಿ ಏನು ನಡೆಯುತ್ತಿದೆ ಎಂಬುದು ಕುಮಾರಸ್ವಾಮಿಗೆ ತಿಳಿದಿಲ್ಲ. ಮೊದಲು ತಮ್ಮ ಮನೆಯ ಮಕ್ಕಳನ್ನು ನೋಡಿಕೊಳ್ಳುವಂತೆ ಅವರಿಗೆ ಸೂಚಿಸಿದರು. ಮನೆಯಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದು ನಿಮಗೆ ತಿಳಿದಿಲ್ಲ. ಸಿದ್ದಾರ್ಥ ವಿಹಾರ್ ಟ್ರಸ್ಟ್‌ನಲ್ಲಿ ಏನು ನಡೆಯುತ್ತದೆ ಎಂಬುದು ನಿಮಗೆ ಗೊತ್ತೇ? ಚುನಾವಣೆ ಆಯೋಗದಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ಅವರಿಗಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ನಾಯಕರಾದ ನೀವು ಆರ್‌ಎಸ್‌ಎಸ್ ಕಲಿಸಿದ ಪಾಠವನ್ನೇ ಹೇಳುತ್ತಿದ್ದರೆ ನಾವು ಪ್ರತಿಕ್ರಿಯಿಸಬೇಕಾಗುತ್ತದೆ. ನೀವು ನಮಗೆ ಮರ್ಯಾದೆ ನೀಡಿದರೆ ನಾವು ನಿಮಗೆ ಮರ್ಯಾದೆ ನೀಡುತ್ತೇವೆ. ಮರ್ಯಾದೆ ಬಿಟ್ಟು ಮಾತನಾಡಲು ನೀವು ಸಿದ್ಧರಿದ್ದರೆ ನಾವು ಕೂಡ ಸಿದ್ಧವಿದ್ದೇವೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ಎನ್‌ಡಿಎ ದೂರು ನೀಡಿದ ಕುರಿತು ಮಾತನಾಡುತ್ತಾ, ಎನ್‌ಡಿಎ ನಾಯಕರು ರಾಜ್ಯಪಾಲರಿಗೆ ದೂರು ನೀಡಲಿ. ಅವರ ಲೆಟರ್ ಹೆಡ್‌ನಲ್ಲಿ ಫಾರ್ಮ್ 7 ಹೋಗಿದೆ. ಅದರ ಬಗ್ಗೆ ದೂರು ನೀಡಲಿ.

ಕಾರ್ಪೊರೇಟರ್, ನಾಯಕರು, ಲೆಟರ್ ಹೆಡ್‌ನಲ್ಲಿ ಫಾರ್ಮ್ 7 ಯಾಕೆ ಇದೆ? 7 ಸಾವಿರ, 5 ಸಾವಿರ ಫಾರ್ಮ್ 7 ಡಿಲೀಟ್ ಮಾಡಲು ಕೊಡುತ್ತಿದ್ದೀರಾ. ಅದೆಲ್ಲವನ್ನೂ ರಾಜ್ಯಪಾಲರು, ಚುನಾವಣೆ ಆಯೋಗಕ್ಕೆ ತಿಳಿಸಲಿ. ಇವರು ಏನು ಬೇಕಾದರೂ ಮಾಡಬಹುದಾ ಎಂದು ಹರಿಹಾಯ್ದರು.

ಕುಮಾರಸ್ವಾಮಿ ಫಾರ್ಮ್ 7 ನೀಡುವುದು ಸಂವಿಧಾನದ ಹಕ್ಕು ಎಂದು ಹೇಳುತ್ತಾರೆ. ಮತದಾರರು ತಮ್ಮ ಮತವನ್ನು ರಕ್ಷಿಸಿಕೊಳ್ಳುವುದು ಅವರ ಹಕ್ಕು ಅಲ್ವಾ? ಮತದಾರರಿಗೆ ಮೋಸ ಮಾಡಿದರೆ, ಪಟ್ಟಿಯಿಂದ ಹೊರಗಿಟ್ಟರೆ ನನ್ನ ಹಕ್ಕು ಎಂದು ಅವರು ದೂರು ನೀಡಬಹುದು ಅಲ್ವಾ? ನಾನು ಬದುಕಿದ್ದೇನೆ ಎಂದು ದೂರು ನೀಡುವುದು ತಪ್ಪಾ ಎಂದು ಗುಡುಗಿದರು.

ಎಫ್‌ಐಆರ್ ರದ್ದು ಮಾಡದಿದ್ದರೆ ನಮ್ಮ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ನುಗ್ಗಿಸುತ್ತೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಪೊಲೀಸ್ ಠಾಣೆಗೆ ನುಗ್ಗಿದರೆ ಏನು ಮಾಡುತ್ತೇನೆ ಎಂಬುದು ಗೊತ್ತಲ್ಲ. ನುಗ್ಗಿದರೆ ಕರ್ನಾಟಕದ ಗೃಹ ಸಚಿವರು ಏನು ಮಾಡುತ್ತಾರೆ ಎಂಬುದು ಅವರಿಗೂ ತಿಳಿದಿದೆ. ನುಗ್ಗುತ್ತೇನೆ, ಹೊಡೆಯುತ್ತೇನೆ, ಬಡಿಯುತ್ತೇನೆ ಇವೆಲ್ಲ ಇಲ್ಲಿ ನಡೆಯುವುದಿಲ್ಲ. ಉತ್ತರ ಪ್ರದೇಶದಲ್ಲಿ ಇಟ್ಟುಕೊಳ್ಳಿ. ಇಲ್ಲಿ ಏನೇ ನಡೆದರೂ ಅಂಬೇಡ್ಕರ್ ಅವರ ಸಂವಿಧಾನ ನಡೆಯುತ್ತದೆ ಅಷ್ಟೇ ಎಂದು ತಿರುಗೇಟು ನೀಡಿದರು.

ಹಂಚಿಕೊಳ್ಳಿ: