ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕ್ರೀಡೆ

ಇತಿಹಾಸ ನಿಮ್ಮನ್ನು....' ಅಜಿತ್ ಅಗರ್ಕರ್ ಔಟ್ ಆದ ಬೆನ್ನಲ್ಲೇ ಗೌತಮ್ ಗಂಭೀರ್ ಸೋಷಿಯಲ್ ಪೋಸ್ಟ್ ವೈರಲ್..!

ಭಾರತ ಕ್ರಿಕೆಟ್ ತಂಡದ ಚೀಫ್ ಸೆಲೆಕ್ಟರ್ ಹುದ್ದೆಯಿಂದ ಅಜಿತ್ ಅಗರ್ಕರ್ ಕೆಳಗಿಳಿದಿದ್ದು, ಅವರ ಅಧಿಕಾರಾವಧಿ ಅಕ್ಟೋಬರ್ 4ಕ್ಕೆ ಅಂತ್ಯವಾಗಿದೆ. ಅವರ ನಿರ್ಗಮನದ ಬೆನ್ನಲ್ಲೇ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಭಾವುಕ...

· ಬೆಂಗಳೂರು ನಗರ
'ಇತಿಹಾಸ ನಿಮ್ಮನ್ನು....' ಅಜಿತ್ ಅಗರ್ಕರ್ ಕಿಕೌಟ್ ಬೆನ್ನಲ್ಲೇ ಗೌತಮ್ ಗಂಭೀರ್ ಸೋಷಿಯಲ್ ಪೋಸ್ಟ್ ವೈರಲ್..!
ಹಂಚಿಕೊಳ್ಳಿ:

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಚೀಫ್ ಸೆಲೆಕ್ಟರ್ ಸ್ಥಾನದಿಂದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನಿರ್ಗಮಿಸಿದ್ದಾರೆ. ಅಜಿತ್ ಅಗರ್ಕರ್ ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಚೀಫ್ ಸೆಲೆಕ್ಟರ್ ಎಂದು ಗುರುತಿಸಿಕೊಂಡಿದ್ದರೂ, ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಅಕ್ಟೋಬರ್ 04ಕ್ಕೆ ಅಜಿತ್ ಅಗರ್ಕರ್ ಅವರ ಚೀಫ್ ಸೆಲೆಕ್ಟರ್ ಒಪ್ಪಂದವು ಮುಕ್ತಾಯಗೊಂಡಿದೆ. ಅಜಿತ್ ಅಗರ್ಕರ್ ಹುದ್ದೆಯಿಂದ ಕೆಳಗಿಳಿದ ತಕ್ಷಣ, ಟೀಂ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಅವರ ಕುರಿತು ಭಾವುಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಚೇತನ್ ಶರ್ಮಾ ಅವರ ನಿರ್ಗಮನದ ನಂತರ ಬಿಸಿಸಿಐ ಅಜಿತ್ ಅಗರ್ಕರ್ ಅವರನ್ನು ಚೀಫ್ ಸೆಲೆಕ್ಟರ್ ಆಗಿ ನೇಮಕ ಮಾಡಿತ್ತು. ಅಜಿತ್ ಅಗರ್ಕರ್ ಮತ್ತು ಗೌತಮ್ ಗಂಭೀರ್ ಅವರ ಜೋಡಿಯ ಅವಧಿಯಲ್ಲಿ ಭಾರತವು ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. ಗೌತಮ್ ಗಂಭೀರ್ ಹೆಡ್‌ ಕೋಚ್ ಆಗುವ ಮುನ್ನ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿದ್ದಾಗ ಭಾರತ ತಂಡವು ಒಂದು ದಶಕದ ನಂತರ ಐಸಿಸಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಅಜಿತ್ ಅಗರ್ಕರ್ ಚೀಫ್ ಸೆಲೆಕ್ಟರ್ ಆಗಿದ್ದ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡವು ಎರಡು ಬಾರಿ ಐಸಿಸಿ ಟಿ20 ವಿಶ್ವಕಪ್ ಹಾಗೂ ಒಮ್ಮೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಈ ಅವಧಿಯಲ್ಲಿ ಭಾರತದ ಅನೇಕ ಸ್ಟಾರ್ ಕ್ರಿಕೆಟಿಗರು ನಿವೃತ್ತಿ ಘೋಷಿಸಿದ್ದು, ಇದು ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ, ಕಳೆದ ಸೆಪ್ಟೆಂಬರ್ 18ರಂದು ನಡೆದ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಅಜಿತ್ ಅಗರ್ಕರ್ ಅವರು ತಮ್ಮ ಕಾಂಟ್ರ್ಯಾಕ್ಟ್ ವಿಸ್ತರಣೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು ಎನ್ನಲಾಗಿದೆ. ಆದ್ದರಿಂದ ಅಕ್ಟೋಬರ್ 04ರವರೆಗೆ ಅಜಿತ್ ಅಗರ್ಕರ್ ಭಾರತದ ಚೀಫ್ ಸೆಲೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.

ಅಜಿತ್ ಅಗರ್ಕರ್ ಬಗ್ಗೆ ಗೌತಮ್ ಗಂಭೀರ್ ಭಾವನಾತ್ಮಕ ಪೋಸ್ಟ್

'ಡಿಯರ್ ಅಜಿತ್ ಬಾಯ್, ನಿಮ್ಮ ಜತೆ ಕೆಲಸ ಮಾಡಿದ್ದು ನಿಜಕ್ಕೂ ಗೌರವದ ವಿಚಾರ. ಆ ಮೂರು ಐಸಿಸಿ ಟ್ರೋಫಿಗಳು ನಿಮ್ಮ ದೃಢ ನಿಲುವಿಗೆ ಸಾಕ್ಷಿಯಾಗಿವೆ. ಯಾವಾಗಲೂ ತಂಡವೇ ಮೊದಲು ಮತ್ತು ತಂಡವೇ ಎಲ್ಲಕ್ಕಿಂತ ಮುಖ್ಯ ಎನ್ನುವ ಆ ನಿಲುವನ್ನು ಇತಿಹಾಸವು ನಿಮ್ಮನ್ನು ಖಂಡಿತವಾಗಿಯೂ ಗೌರವದಿಂದ ನೆನಪಿಸಿಕೊಳ್ಳುತ್ತದೆ ಎಂದು ನಾನು ಹೇಳಲೇಬೇಕು. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು!!" ಎಂದು ಗೌತಮ್ ಗಂಭೀರ್ ಬರೆದುಕೊಂಡಿದ್ದಾರೆ.

ಅಜಿತ್ ಅಗರ್ಕರ್ ಟೀಂ ಇಂಡಿಯಾ ಚೀಫ್ ಸೆಲೆಕ್ಟರ್ ಆಗುವ ಮುನ್ನ ಭಾರತವು ಒಂದು ದಶಕದ ಕಾಲ ಐಸಿಸಿ ಟ್ರೋಫಿ ಗೆಲ್ಲಲು ಪರದಾಡುತ್ತಿತ್ತು. ಆದರೆ ಅಗರ್ಕರ್ ಚೀಫ್ ಸೆಲೆಕ್ಟರ್ ಆದ ಮರು ವರ್ಷವೇ ಭಾರತ ತಂಡವು 2024ರಲ್ಲಿ ಐಸಿಸಿ ಟಿ20 ವಿಶ್ವಕಪ್ ಜಯಿಸಿ ಸಂಭ್ರಮಿಸಿತ್ತು. ಅದರ ಮರು ವರ್ಷ ಅಂದರೆ 2025ರಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಇದಲ್ಲದೆ ಈ ವರ್ಷ ಮತ್ತೊಮ್ಮೆ ಐಸಿಸಿ ಟಿ20 ವಿಶ್ವಕಪ್ ಜಯಿಸಿತ್ತು. ಭಾರತ ತಂಡವು ಮೂರು ವರ್ಷಗಳಲ್ಲಿ ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲುವಲ್ಲಿ ಚೀಫ್ ಸೆಲೆಕ್ಟರ್ಸ್‌ ಪಾತ್ರವನ್ನು ಕಡೆಗಣಿಸುವಂತಿಲ್ಲ.

ಇದೆಲ್ಲದರ ಹೊರತಾಗಿ, ಅಜಿತ್ ಅಗರ್ಕರ್ ತಮ್ಮ ಚೀಫ್ ಸೆಲೆಕ್ಟರ್ ಅವಧಿಯಲ್ಲಿ ಹಲವು ಕ್ರಿಕೆಟಿಗರ ನಿವೃತ್ತಿಗೂ ಸಾಕ್ಷಿಯಾಗಿದ್ದಾರೆ. ಈ ಅವಧಿಯಲ್ಲೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರೆ, ದಿಗ್ಗಜ ಆಟಗಾರರಾದ ರವಿಚಂದ್ರನ್ ಅಶ್ವಿನ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹಂಚಿಕೊಳ್ಳಿ: